ರಾಷ್ಟ್ರೀಯ

ಚೀನಾ, ಪಾಕ್‌ಗೆ ಇನ್ನು ಹೆದರಬೇಕಿಲ್ಲ! ಶತ್ರು ಕ್ಷಿಪಣಿ ಉಡೀಸ್‌

Pinterest LinkedIn Tumblr

defence40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಭಾರತ ರಷ್ಯಾ ನಿರ್ಮಿತ ಎಸ್‌ 400 ಟ್ರಿಂಫ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಖರೀದಿಸಲು ಉದ್ದೇಶಿಸಿದೆ. ಕ್ಷಿಪಣಿ ನಿರೋಧಕ ವ್ಯವಸ್ಥೆಯಲ್ಲಿ ಅತ್ಯಂತ ಸುಧಾರಿತ ವ್ಯವಸ್ಥೆ ಇದು ಎಂಬ ಹೆಗ್ಗಳಿಕೆಯನ್ನು ಎಸ್‌ 400 ಟ್ರಿಂಫ್ ಹೊಂದಿದೆ. ಈ ಮೂಲಕ ಚೀನಾ-ಪಾಕಿಸ್ತಾನದ ಸಂಭಾವ್ಯ ದಾಳಿಗಳನ್ನು ತಡೆಗಟ್ಟಲು ಭಾರತ ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ 400 ಟ್ರಿಂಫ್ ಹೇಗಿರುತ್ತದೆ? ಈ ವ್ಯವಸ್ಥೆಯನ್ನು ಖರೀದಿಸುವುದರಿಂದ ಏನು ಪ್ರಯೋಜನ? ಎಂಬಿತ್ಯಾದಿ ವಿಚಾರಗಳ ಕುರಿತ ಮಾಹಿತಿಗಳು ಇಲ್ಲಿವೆ.

„ಆಗಸದ ಮೇಲೆ ಹದ್ದಿನ ಕಣ್ಣು!
ಎಸ್‌ 400 ಟ್ರಿಂಫ್ ಎನ್ನುವುದು ರಷ್ಯಾ ನಿರ್ಮಿದ ದೂರಗಾಮಿ ವಾಯು ರಕ್ಷಣಾ ವ್ಯವಸ್ಥೆ. ರಷ್ಯಾದ ಅಲ್‌ಮಾಸ್‌ ಆಂಟೆ ಡಿಸೈನ್‌ ಬ್ಯೂರೋ ಇದನ್ನು ಆವಿಷ್ಕರಿಸಿದೆ. ಎಸ್‌ 300 ಪಿ ಮಾದರಿಯ ವಾಯು ರಕ್ಷಣಾ ವ್ಯವಸ್ಥೆಯ ಸುಧಾರಿತ ಆವೃತ್ತಿ ಇದಾಗಿದೆ. ಇದಕ್ಕೆ ನ್ಯಾಟೋ ಮಿಲಿಟರಿ ಎಸ್‌ಎ-21 ಗ್ರಾವ್ಲರ್‌ ಹೆಸರಿಂದ ಕರೆಯುತ್ತದೆ.

ಎಸ್‌ 400 ಟ್ರಿಂಫ್ ಅಭಿವೃದ್ಧಿ
ಎಸ್‌ 400 ಟ್ರಿಂಫ್ ವ್ಯವಸ್ಥೆಯ ಅಭಿವೃದ್ಧಿಯನ್ನು ರಷ್ಯಾ 1990ಕ್ಕೂ ಮೊದಲೇ ಅಭಿವೃದ್ಧಿ ಪಡಿಸಲು ಆರಂಭಿಸಿತ್ತು. ಇದು ಸಂಪೂರ್ಣವಾಗಿದ್ದು 1999ರಲ್ಲಿ. ಅದೇ ವರ್ಷ ಮೊದಲ ಪರೀಕ್ಷೆ ನಡೆಸಲಾಗಿದ್ದು ಯಶಸ್ವಿಯಾಗಿತ್ತು. ಬಳಿಕ 2001ರಲ್ಲಿ ಇದು ರಷ್ಯಾ ಸೇನೆಗೆ ಸೇರ್ಪಡೆಯಾಗಿತ್ತು. 2004ರ ಬಳಿಕ ಇದರ ಸಂಪೂರ್ಣ ಉತ್ಪಾದನೆ ಆರಂಭವಾಗಿದ್ದು, 2007ರಲ್ಲಿ ರಷ್ಯಾ ಸೇನೆ ಇದರ ಅಧಿಕೃತ ಬಳಕೆಯ ಮುದ್ರೆಯೊತ್ತಿತ್ತು.

ಎಸ್‌ 400 ಟ್ರಿಂಫ್ ವೈಶಿಷ್ಟ್ಯಗಳೇನು?
„ಅತಿ ತಳಮಟ್ಟದಲ್ಲಿ ಬರುವ ಶತ್ರು ಕ್ಷಿಪಣಿ, ಡ್ರೋನ್‌, ವಿಮಾನಗಳನ್ನೂ ಗುರುತಿಸುತ್ತದೆ. „ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆ. ತನ್ನಷ್ಟಕ್ಕೇ ಗುರಿಯನ್ನೂ ಗುರುತಿಸಿಕೊಳ್ಳುತ್ತದೆ. „ ಒಂದೇ ಎಸ್‌ 400 ವ್ಯವಸ್ಥೆಯಲಲ್ಲಿ ಮೂರ್‍ನಾಲ್ಕು ವಿಧದ ನಿರೋಧಕ ಕ್ಷಿಪಣಿಗಳನ್ನು ಅಳವಡಿಸಬಹುದು. „ ವ್ಯವಸ್ಥೆ ನಿಯೋಜನೆಗೆ ಕೇವಲ 10 ನಿಮಿಷ ಸಾಕು. ತಕ್ಷಣ ದಾಳಿಗೆ ಸಿದ್ಧ. „ ಎಲ್ಲಾ ವಿಧದ ಯುದ್ಧ ವಿಮಾನಗಳು, ಕ್ಷಿಪಣಿಗಳನ್ನು ಇದು ಹೊಡೆದುರುಳಿಸಬಲ್ಲದು.„ ಸುಮಾರು 400 ಕಿ.ಮೀ ದೂರದವರೆಗೆ ಕ್ರಮಿಸುವ ಕ್ಷಿಪಣಿಗಳನ್ನು ಹೊಂದಿರುತ್ತದೆ. „ ಏಕ ಕಾಲಕ್ಕೆ 36 ಗುರಿಗಳನ್ನು ಇದು ಗುರುತಿಸುತ್ತದೆ. „ ಇದರಲ್ಲಿ ಅಳವಡಿಸಲಾಗುವ ಕ್ಷಿಪಣಿಗಳು ಸೂಪರ್‌ ಸಾನಿಕ್‌ ಮತ್ತು ಹೈಪರ್‌ ಸಾನಿಕ್‌ ವೇಗದವು. „ ಸುಮಾರು 24 ಕೇಜಿ ಸಿಡಿತಲೆಗಳನ್ನು ಇದರಲ್ಲಿನ
ಕ್ಷಿಪಣಿಗಳು ಹೊಂದಿರುತ್ತವೆ.

ಎಸ್‌ 400 ಟ್ರಿಂಫ್ ತಾಂತ್ರಿಕತೆ
*4 ವಿಧದ ಕ್ಷಿಪಣಿಗಳನ್ನು ಹೊಂದಿರುತ್ತದೆ
„  *4.6 ಕಿ.ಮೀ. ಪ್ರತಿ ಸೆಕೆಂಡ್‌ಗೆ ಕ್ರಮಿಸುವ ಸಾಮರ್ಥ್ಯ
„  *400 ಕಿ.ಮೀ ವರೆಗೆ ಗರಿಷ್ಠ ದಾಳಿ ಸಾಮರ್ಥ್ಯ
„  *2 ಕಿ.ಮೀ.ವರೆಗೆ ಕನಿಷ್ಠ ದಾಳಿ ಸಾಮರ್ಥ್ಯ
„  *ಏಕಕಾಲಕ್ಕೆ 36 ಗುರಿಗಳನ್ನು ಗುರುತಿಸುತ್ತದೆ
„  *3 ಸೆಕೆಂಡ್‌ ಗುರಿ ಗುರುತಿಸಿದ ಕೂಡಲೇ ದಾಳಿ
*ನಡೆಸಲು ತೆಗೆದುಕೊಳ್ಳುವ ಸಮಯ
„  *15 ವರ್ಷ ಎಸ್‌ 400 ಟ್ರಿಂಫ್ ವ್ಯವಸ್ಥೆ ಆಯುಷ್ಯ

„ಎಸ್‌ 400 ವ್ಯವಸ್ಥೆ ಹೇಗಿರುತ್ತದೆ?
ಎಸ್‌ 400 ಒಂದು ಯುನಿಟ್‌ ಅಂದರೆ ಒಟ್ಟು ನಾಲ್ಕು ವಿಧಧ ಕ್ಷಿಪಣಿ ನಿರೋಧಕಗಳನ್ನು ತನ್ನಲ್ಲಿ ಹೊಂದಿರುತ್ತದೆ. ಇದರಲ್ಲಿ
400 ಕಿ.ಮೀ. ದೂರ ಸಾಮರ್ಥ್ಯದ 40ಎನ್‌6 ಕ್ಷಿಪಣಿ, 250 ಕಿ.ಮೀ. ಕ್ರಮಿಸುವ 48 ಎನ್‌6 ಕ್ಷಿಪಣಿ, 120 ಕಿ.ಮೀ.
ಕ್ರಮಿಸುವ 9ಎಮ್‌96ಇ2 ಕ್ಷಿಪಣಿ, 40 ಕಿ.ಮೀ. ಕ್ರಮಿಸುವ 9ಎಮ್‌96ಇ ಕ್ಷಿಪಣಿಗಳನ್ನು ಹೊಂದಿರುತ್ತವೆ. ಈ ನಿರೋಧಕ
ವ್ಯವಸ್ಥೆಯ ಒಂದು ಯುನಿಟ್‌ ಅಂದರೆ ಕ್ಷಿಪಣಿ ಉಡ್ಡಯನ ವ್ಯವಸ್ಥೆ, ಎರಡು ನಿಯಂತ್ರಣ ವ್ಯವಸ್ಥೆಗಳು, ಎರಡು ರಾಡಾರ್‌
ವಾಹನಗಳನ್ನು ಇದು ಹೊಂದಿರುತ್ತವೆ.

ಭಾರತದ ಖರೀದಿಸುವುದು ಎಷ್ಟು?
ಸುಮಾರು 12 ಯುನಿಟ್‌ ಎಸ್‌ 400 ಟ್ರಿಂಫ್ ವಾಯು ವಲಯ ರಕ್ಷಣಾ ವ್ಯವಸ್ಥೆಯನ್ನು ಈ ಮೊದಲು ಖರೀದಿಸಲು ಭಾರತ ಉದ್ದೇಶಿಸಿತ್ತು. ಆದರೆ ಸದ್ಯ ರಕ್ಷಣಾ ಇಲಾಖೆ 5 ಯುನಿಟ್‌ಗಳ ಖರೀದಿಗೆ ಮಾತ್ರ ಹಸಿರು ನಿಶಾನೆ ತೋರಿದೆ. ಇದರಿಂದಾಗಿ ಸುಮಾರು 20 ಕ್ಷಿಪಣಿ ಲಾಂಚರ್‌ಗಳು (ವಿಮಾನ ನಿರೋಧಕ/ಕ್ಷಿಪಣಿ ನಿರೋಧಕ)ಗಳು ಮತ್ತು ಇದರ ನಿಯಂತ್ರಕಗಳು ಇರಲಿವೆ. 2017ರಿಂದ ಈ ವ್ಯವಸ್ಥೆ ಹಂತ ಹಂತವಾಗಿ ಸಶಸ್ತ್ರ ಪಡೆಗಳ ಬತ್ತಳಿಕೆಗೆ ಸೇರಲಿವೆ. ಈ ಮೊದಲೇ ಚೀನಾ ಎಸ್‌ 400 ಟ್ರಿಂಫ್ ವ್ಯವಸ್ಥೆಯನ್ನು ಖರೀದಿಸಿದ್ದು ತನ್ನ ಸೇನೆಗೆ ಸೇರ್ಪಡೆಗೊಳಿಸಿದೆ.
-ಉದಯವಾಣಿ

Write A Comment