ರಾಷ್ಟ್ರೀಯ

ನಾನು ಅವನಲ್ಲ…ಅವಳು ಎಂದ ಒಡಿಶಾದ ಸರ್ಕಾರಿ ಅಧಿಕಾರಿ

Pinterest LinkedIn Tumblr

Ratikanta-Pradhanಭುವನೇಶ್ವರ: ಉನ್ನತ ಹುದ್ದೆಯಲ್ಲಿರುವ ಒಡಿಶಾದ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮನ್ನು ತೃತೀಯಲಿಂಗಿ(ಮಂಗಳಮುಖಿ) ಎಂದು ಘೋಷಿಸಿಕೊಂಡಿದ್ದಾರೆ.

ರತಿಕಾಂತ ಪ್ರಧಾನ್(32) ಎಂಬ ಒಡಿಶಾ ಆರ್ಥಿಕ ಸೇವಾ ಇಲಾಖೆಯ ಅಧಿಕಾರಿ ತಾವು ತೃತೀಯಲಿಂಗಿಯೊಂದೂ, ತಮ್ಮ ಅಧಿಕೃತ ಹೆಸರು ಇನ್ನುಮುಂದೆ ಐಶ್ವರ್ಯ ಋತುಪರ್ಣ ಪ್ರಧಾನ್ ಎಂದೂ ಹೇಳಿಕೊಂಡಿದ್ದಾರೆ.

ಒಂದೂವರೆ ವರ್ಷದ ಹಿಂದೆ ಸುಪ್ರೀಂಕೋರ್ಟ್ ಮಂಗಳಮುಖಿಯರನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಬೇಕೆಂದು ತೀರ್ಪು ನೀಡಿದ ನಂತರ ಈ ಅಧಿಕಾರಿಯ ಹೆಜ್ಜೆ ಕ್ರಾಂತಿಯಾಗಿದೆ. ಕೋರ್ಟ್‍ನಲ್ಲಿ ಅಫಿಡವಿಟ್ ಸಲ್ಲಿಸಿ ಹೊಸ ಹೆಸರು ಮತ್ತು ಬದಲಾದ ಲಿಂಗದ ಮಾಹಿತಿ ನೀಡಿದ್ದು, ಸರ್ಕಾರಕ್ಕೂ ಈ ಪತ್ರ ನೀಡಲಿರುವುದಾಗಿ ತಿಳಿಸಿದ್ದಾರೆ.

Write A Comment