ರಾಷ್ಟ್ರೀಯ

ರಾಜಸ್ಥಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಪರ ಘೋಷಣೆ ಕೂಗಿದ 4 ಬಂಧನ

Pinterest LinkedIn Tumblr

ISISಜೈಪುರ: ಮೆರವಣಿಗೆ ವೇಳೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಪರ ಘೋಷಣೆ ಕೂಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಶುಕ್ರವಾರ ತೋಂಕ್ ಜಿಲ್ಲೆಯ ಮಲಪುರ ಪಟ್ಟಣದಲ್ಲಿ ಮೆರವಣಿಯನ್ನು ಆಯೋಜಿಸಲಾಗಿತ್ತು. ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಇಸಿಸ್ ಸಂಘಟನೆ ಪರವಾಗಿ ಘೋಷಣೆ ಕೂಗಿದ್ದರು. ಘಟನೆ ನಡೆದ ನಂತರ ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು.

ಮೆರವಣಿಗೆಯಲ್ಲಿ ಚಿತ್ರೀಕರಿಸಿದ್ದ ವೀಡಿಯೋದ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಫಿರೋಜ್, ವಾಸಿಮ್, ವಾಸಿಮ್ ಅಕ್ರಮ್ ಮತ್ತು ಮೊಹಮ್ಮದ್ ಫಹೀದ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 153 (ಎ) ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ತೋಂಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

Write A Comment