ರಾಷ್ಟ್ರೀಯ

ಗಂಗೆ ನದಿ ಸ್ವಚ್ಛತೆ ಗಂಗಾ ಪೂಜೆಗೆ ಸಮ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ

Pinterest LinkedIn Tumblr

pranabಕೊಲ್ಕತ್ತಾ: ಗಂಗಾ ನದಿಯನ್ನು ಸ್ವಚ್ಛಗೊಳಿಸುವುದು ಎಂದರೆ ಪವಿತ್ರ ಗಂಗಾ ಪೂಜೆಗೆ ಸಮಾನ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದಾರೆ.

ಸಾಲ್ಕಿಯಾದ ಬನ್ಶಿಧಾರ್ ಜಲನ್ ಸ್ಮೃತಿ ಮಂದಿರದಲ್ಲಿ ಗಂಗಾನದಿಗೆ ಅಭಿಮುಖವಾಗಿ ನಿರ್ಮಿಸಲಾಗಿರುವ 51 ಅಡಿ ಎತ್ತರದ ಶಿವನ ವಿಗ್ರಹವನ್ನು ಅನಾವರಣಗೊಳಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು. ಹಿಮಾಲಯದಲ್ಲಿ ಹುಟ್ಟುವ ಗಂಗಾ ನದಿ ಬಂಗಾಳ ಕೊಲ್ಲಿ ಸೇರುವವರೆಗೂ ಅಗಾಧ ಪ್ರಭಾವ ಬೀರುತ್ತಾ ಸಾಗಿತ್ತದೆ ಎಂದರು.

ಪ್ರೇಮ, ಅನುಕಂಪ ಮತ್ತು ಮಾನವೀಯತೆ ಎಲ್ಲಾ ಧರ್ಮಗಳ ಸಂದೇಶವಾಗಿದೆ. ಈ ಸಂದೇಶವೇ ಸಮಾಜವನ್ನು ಸೌಹಾರ್ದದ ಕಡೆಗೆ ನಡೆಯುವಂತೆ ಮಾಡುತ್ತದೆ ಎಂದು ಪ್ರಣಬ್ ಮುಖರ್ಜಿ ಹೇಳಿದರು.

ಇದೇ ವೇಳೆ ಗಂಗಾ ತಟದಲ್ಲಿ ಸುಂದರ ದೇವಾಲಯ ಹಾಗೂ ಸುಂದರ ಶಿವ ಪ್ರತಿಮೆ ಸ್ಥಾಪಿಸಿದ್ದಕ್ಕಾಗಿ ದೇವಾಲಯದ ಟ್ರಸ್ಟ್​ನ್ನು ಅಭಿನಂದಿಸಿದರು. ಗಂಗಾನದಿಯನ್ನು ಸ್ವಚ್ಛಗೊಳಿಸಲು ಮತ್ತು ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ದೇವಾಲಯ ಅಧಿಕಾರಿಗಳು ಮತ್ತು ಟ್ರಸ್ಟ್​ನ್ನು ಅವರು ಒತ್ತಾಯಿಸಿದರು.

Write A Comment