ರಾಷ್ಟ್ರೀಯ

ನೇತಾಜಿ ಸಾವು: ಮೊಮ್ಮಗನಿಂದ ಭಾರತ-ರಷ್ಯಾ ರಹಸ್ಯಪತ್ರ ಬಿಡುಗಡೆ

Pinterest LinkedIn Tumblr

netaji1

ಲಂಡನ್: ನೇತಾಜಿ ಸುಬಾಸ್‌ಚಂದ್ರ ಬೋಸ್ ಅವರ ಸಾವಿನ ಕುರಿತು ರಷ್ಯಾ ಮತುತಿ ಬಾರತ ನಡುವೆ ನಡೆದ ರಹಸ್ಯ ಪತ್ರವ್ಯವಹಾರವನ್ನು ನೇತಾಜಿಯವರ ಮೊಮ್ಮಗ, ಹವ್ಯಾಸಿ ಪತ್ರಕರ್ತ, ಆಶೀಶ್ ರೇ ಬಿಡುಗಡೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ ಕೊನೆಗೆ ಮಾಸ್ಕೊಗೆ ಬೇಟಿ ನೀಡುವ ಹಿನ್ನೆಲೆಯಲ್ಲಿ, ಬಾರತ ಸರ್ಕಾರದ ವರ್ಗೀಕೃತ ಕಡತಗಳು ಎನ್ನಲಾದ ದಾಖಲೆಗಳನ್ನು ರೇ ಬಿಡುಗಡೆ ಮಾಡಿದ್ದಾರೆ.

ನೇತಾಜಿಯವರು ಮೃತಪಟ್ಟಿದ್ದಾರೆ ಎಂದು ನಂಬಲಾದ ಅವಧಿಯಲ್ಲಿ (1945) ಅವರ ಚಲನವಲನಗಳ ಬಗ್ಗೆ ಬಾರತ ಹಾಗೂ ರಷ್ಯಾ ಸರ್ಕಾರದ ನಡುವೆ 1991ರಿಂದ 1995ರ ನಡುವೆ ನಡೆದ ಪತ್ರವ್ಯವಹಾರದ ದಾಖಲೆಗಳು ಇವು ಎಂದು ರೇ ಹೇಳಿಕೊಂಡಿದ್ದಾರೆ. ಬೋಸ್ ಅವರು 1945ರಲ್ಲಿ ಅಥವಾ ಬಳಿಕ ರಷ್ಯಾದ ಗಡಿಯನ್ನು ಪ್ರವೇಶಿಸಿದ್ದಾರೆಯೇ ಎಂದು ಬಾರತ ಸರ್ಕಾರ ರಷ್ಯಾದಿಂದ ಸ್ಪಷ್ಟನೆ ಬಯಸಿತುತಿ.

1991ರ ಸೆಪ್ಟೆಂಬರ್‌ನಲ್ಲಿ ಬಾರತ ಸರ್ಕಾರ ರಷ್ಯಾಗೆ ಪತ್ರ ಬರೆದು, ನೇತಾಜಿಯವರು ರಷ್ಯಾ ಪ್ರವೇಶಿಸಿ, ಅಲ್ಲಿ ವಾಸವಿದ್ದರೇ ಎಂದು ಪ್ರಶ್ನಿಸಿದೆ. ಇದಕ್ಕೆ ರಷ್ಯಾ ಸರ್ಕಾರ 1992ರ ಜನವರಿಯಲ್ಲಿ ಉತತಿರ ಬರೆದು, ಬಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ರಷ್ಯಾದಲ್ಲಿ ನೆಲೆಸಿದ್ದ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಹೇಳಿತು.

ಮೂರು ವರ್ಷಗಳ ಬಳಿಕ ಬಾರತ ಮತೆತಿ ರಷ್ಯಾಗೆ ಪತ್ರ ಬರೆಯಿತು. ಪ್ರಾಚ್ಯವಸುತಿಗಳ ಹಿನ್ನೆಲೆಯಲ್ಲಿ ಮತೆತಿ ಕೆಲ ಊಹೆಗಳಿವೆ. ಈ ವಿಷಯವನ್ನು ಮರುಪರಿಶೀಲಿಸಿ. 1945ರಲ್ಲಿ ಅಥವಾ ನಂತರ ನೇತಾಜಿ ರಷ್ಯಾ ಗಡಿಯೊಳಕ್ಕೆ ಬಂದು ನೆಲೆಸಿದ್ದರೇ ಎಂಬ ಬಗ್ಗೆ ಅಂತಿಮ ನಿರ್ಧಾರ ಕೊಡಿ ಎಂದು ಕೋರಿತುತಿ. ರಷ್ಯಾ ಮತೆತಿ ತನ್ನ ಮೊದಲಿನ ಉತತಿರವನ್ನೇ ನೀಡಿತು.

ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ನಾವು ಯಾವುದು ಸರಿಯಲ್ಲ ಎನ್ನುವುದನ್ನು ತೆಗೆದುಹಾಕಬೇಕು. ಉಯ ಸರ್ಕಾರಗಳ ನಡುವೆ ನಡೆದ ಪತ್ರವ್ಯವಹಾರದಿಂದ ತಿಳಿಯುವ ಅಂಶವೆಂದರೆ, ಬಹುತೇಕ ಮಂದಿ ಶಂಕಿಸಿರುವಂತೆ ಸುಬಾಸ್ ಹೋಗಿರಲಿಲ್ಲ ಎಂದು ರೇ ಹೇಳಿದರು.

ಕಳೆದ ಕೆಲ ತಿಂಗಳುಗಳಿಂದ ನೇತಾಜಿಗೆ ಸಂಬಂಧಿಸಿದ ಕಡತಗಳನ್ನು ವರ್ಗೀಕೃತ ಕಡತಗಳಿಂದ ಹೊರತರುವಂತೆ ಸರ್ಕಾರದ ಮೇಲೆ ಒತತಿಡಗಳು ಹೆಚ್ಚುತಿತಿವೆ. ಈ ಸ್ವಾತಂತ್ರ್ಯ ಸೇನಾನಿ, 1945ರ ಆಗಸ್ಟ್ 18ರಂದು ಥಾಯ್ಲೆಂಡಿನ ತೈಪೆಯಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದಿದ್ದರು ಎಂದು ಹೇಳುವ ಸಿದ್ಧಾಂತವನ್ನು ಹಲವು ಮಂದಿ ತಿರಸ್ಕರಿಸಿದ್ದರು. ಹಾಗೂ ಅದಕ್ಕೆ ಪೂರಕವಾದ ಪುರಾವೆಗಳನ್ನು ನೀಡುವಂತೆ ಆಗ್ರಹಿಸಿದ್ದರು.

Write A Comment