ರಾಷ್ಟ್ರೀಯ

ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಬಂಧಿತ ಐಎಸ್ ಐ ಏಜೆಂಟ್ ಜೊತೆ ನಂಟು?

Pinterest LinkedIn Tumblr

saahid-afridiನವದೆಹಲಿ: ಐಎಸ್ ಐ ಬೇಹುಗಾರಿಕಾ ಆರೋಪದ ಮೇಲೆ ಬಂಧಿತನಾಗಿರುವ ಭಯೋತ್ಪಾದಕ ಮೊಹಮದ್ ಇಜಾಜ್ ಸಹೋದರ ಫಾವದ್ ಪಾಕಿಸ್ತಾನದ ಉನ್ನತ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.

ಬಂಧಿತ ಫಾವದ್ ಪಾಕಿಸ್ತಾನ ಕ್ರಿಕೆಟಿಗ ಸಾಹಿದ್ ಅಫ್ರಿದಿ ಜೊತೆಗೆ ತೆಗೆಸಿಕೊಂಡಿರುವ ಫೋಟೋ ತೋರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಪಾಕಿಸ್ತಾನದ ಐಎಸ್ ಐ ನಿಂದ ಕಳುಹಿಸಲ್ಪಟ್ಟಿರುವ ಭಯೋತ್ಪಾದಕ ಮೊಹಮದ್ ಇಜಾಜ್ ನನ್ನು  ಕಳೆದ ವಾರ ಉತ್ತರ ಪ್ರದೇಶದಲ್ಲಿ ಬಂಧಿಸಲಾಯಿತು. ಈ ಎಲ್ಲಾ ಮಾಹಿತಿಗಳನ್ನು ಗಮನಿಸಿದಾಗ ಮೊಹಮದ್ ಇಜಾಜ್ ಐಎಸ್ ಐ ಏಜೆಂಟ್ ಎಂಬುದನ್ನು ಸಾಬೀತು ಪಡಿಸುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಫೋಟೋವನ್ನು ವಶಕ್ಕೆ ತೆಗೆದು ಕೊಂಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Write A Comment