ರಾಷ್ಟ್ರೀಯ

ಆರ್ ಎಸ್ ಎಸ್ ಸಭೆಯಲ್ಲಿ ಮುಸ್ಲಿಂ ಮಹಿಳೆಯರಿಂದ ಕುಟುಂಬ ಯೋಜನೆ ಬಗ್ಗೆ ಪ್ರಮಾಣ ವಚನ

Pinterest LinkedIn Tumblr

muslim-womenನವದೆಹಲಿ: ಆರ್ ಎಸ್ಎಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್ ಕುಟುಂಬ ಯೋಜನೆ ಕುರಿತಂತೆ ಆಯೋಜಿಸಿದ್ದ ಸಭೆಯಲ್ಲಿ ಮುಸ್ಲಿಂ ಮಹಿಳೆಯರು ಕುಟುಂಬ ಯೋಜನೆ ನಿರ್ಧಾರ ಕೈಗೊಳ್ಳುವ ನಿರ್ಣಯ ಕೈಗೊಂಡಿತ್ತು.

ಅಸಹಿಷ್ಣುತೆ, ಭಯೋತ್ಪಾದನೆ ಸೇರಿದಂತೆ ಒಟ್ಟು 7 ನಿರ್ಣಯಗಳನ್ನು ಸಭೆಯಲ್ಲಿ ಕೈಗೊಂಡಿದ್ದು, ಈ ಸಭೆಗೆ ಸುಮಾರು 5 ಸಾವಿರ ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು. ಮಕ್ಕಳ ವಿದ್ಯಾಭ್ಯಾಸ ಮತ್ತು ಉದ್ಯೋಗದ ಹಿನ್ನೆಲೆಯಲ್ಲಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳುವುದಾಗಿ 5 ಸಾವಿರ ಮುಸ್ಲಿಂ ಮಹಿಳೆಯರು ಸಂವಾದದಲ್ಲಿ ಪ್ರಮಾಣವಚನ ಸ್ವೀಕರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

‘ಅಗತ್ಯ ಪೋಷಣೆ, ಶಿಕ್ಷಣ ಒದಗಿಸಲು ಸಾಧ್ಯವಾಗುವಂಥವರು ಮಾತ್ರ ಹಲವು ಮಕ್ಕಳನ್ನು ಹೊಂದಬಹುದು ಎಂದು ಕುರಾನ್‌ನಲ್ಲೇ ಸ್ಟಷ್ಟವಾಗಿ ಹೇಳಲಾಗಿದೆ. ಈ ನಿಯಮವನ್ನು ಎಲ್ಲ ಮುಸ್ಲಿಮರು ಪಾಲಿಸಿದರೆ ಒಳಿತು,’ಎಂದು ಹೇಳಿದೆ. ‘ಮುಸ್ಲಿಂ ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣಕ್ಕಾಗಿ ಯೋಜನೆ ಆರಂಭಿಸುವ ಉದ್ದೇಶವಿದ್ದು, ಒಂದು ಸಾವಿರ ರೂ. ಠೇವಣಿ ನೀಡಿ ಆಜೀವ ಸದಸ್ಯತ್ವ ಪಡೆದ ಮಹಿಳೆಯರು ಯೋಜನೆಯ ಲಾಭ ಪಡೆಯಬಹುದು,’ಎಂದು ಇಂದ್ರೇಶ್‌ ತಿಳಿಸಿದ್ದಾರೆ.

Write A Comment