ರಾಷ್ಟ್ರೀಯ

ಮೋದಿ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿದೆ: ರಾಹುಲ್ ಗಾಂಧಿ

Pinterest LinkedIn Tumblr

rahulನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉದ್ದೇಶಪೂರ್ವಕವಾಗಿ ಕಾರ್ಮಿಕ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವುದು ಕಾರ್ಮಿಕರಲ್ಲಿ ಅತೃಪ್ತಿ ಮೂಡಿಸಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಭೂಸ್ವಾಧೀನ ಮಸೂದೆಗಾಗಿ ರೈತರಿಗಾಗಿ ಮಾಡಿದ ಹೋರಾಟದ ರೀತಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡಲಿದೆ ಎಂದು ಭರವಸೆ ನೀಡಿದರು. ಕಾರ್ಮಿಕರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಸದಾ ಬದ್ಧವಾಗಿದೆ ಎಂದರು.

ರೈತರ ಹಕ್ಕಿಗಾಗಿ ಹೋರಾಟ ಮಾಡಿದಂತೆ ಕಾರ್ಮಿಕರ ಹಿತಕ್ಕಾಗಿ ಬಿಜೆಪಿ, ಮೋದಿ ಮತ್ತು ಆರೆಸ್ಸೆಸ್‌ನೊಂದಿಗೆ ಹೋರಾಡಲು ಸಿದ್ದ ಎಂದು ಘೋಷಿಸಿದರು.

ಭಾರತ ದೇಶವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿಸಿ ನೆರೆಯ ರಾಷ್ಟ್ರವಾದ ಚೀನಾಗೆ ಹೆಚ್ಚಿನ ಪೋಪೋಟಿ ನೀಡಬೇಕು ಎನ್ನುವ ಪ್ರಧಾನಿ ಮೋದಿ ನಿಲುವು ಸ್ವಾಗತಾರ್ಹ. ಆದರೆ, ಯಾವುದೇ ಕಾರಣಕ್ಕೂ ಕಾರ್ಮಿಕರ ಕಾಯ್ದೆಗಳನ್ನು ದುರ್ಬಲಗೊಳಿಸಲು ಬಿಡುವುದಿಲ್ಲ ಎಂದರು.

ಪ್ರಧಾನಿ ಮೋದಿ ಬಾರತೀಯ ಕಾರ್ಮಿಕರನ್ನು ಅಪ್ರಾಮಾಣಿಕರು, ಸೋಮಾರಿಗಳು ಎಂದು ಭಾವಿಸುತ್ತಿರುವುದು ಸರಿಯಲ್ಲ. ದೇಶದ ಕಾರ್ಮಿಕರು ವಿಶ್ವಮಟ್ಟದಲ್ಲಿ ಬೆಳೆಯುವಂತಹ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಕೊಂಡಾಡಿದರು.

ಗುಜರಾತ್, ರಾಜಸ್ಥಾನ ಮತ್ತು ಹರಿಯಾಣಾ ರಾಜ್ಯಗಳಲ್ಲಿ ಜಾರಿಗೆ ತಂದ ಹೊಸ ಕಾರ್ಮಿಕ ಕಾಯ್ದೆಗಳನ್ನು ನೋಡಿದಲ್ಲಿ ಮೋದಿ ಕಾರ್ಮಿಕರನ್ನು ತುಳಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ದುರ್ಬಲ ಕಾರ್ಮಿಕ ಕಾಯ್ದೆಗಳನ್ನು ತಂದು ಕಾರ್ಮಿಕರನ್ನು ತಮ್ಮ ಬೆರಳಿನಡಿ ಕುಣಿಸಲು ಪ್ರಧಾನಿ ಮೋದಿ ರಣತಂತ್ರ ರೂಪಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಡುಗಿದ್ದಾರೆ.

Write A Comment