ರಾಷ್ಟ್ರೀಯ

ಜಲಪ್ರಳಯ: ಸಹಜ ಸ್ಥಿತಿಯತ್ತ ಚೆನ್ನೈ ವಿಮಾನ ನಿಲ್ದಾಣ

Pinterest LinkedIn Tumblr

vimanaನವದೆಹಲಿ: ಕುಂಭದ್ರೋಣ ಮಳೆಯಿಂದ ಅಕ್ಷರ ಸಹ ಕೆರೆಯಂತಾಗಿದ್ದ ಚೆನ್ನೈ ವಿಮಾನ ನಿಲ್ದಾಣ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಶೀಘ್ರವೇ ವಾಣಿಜ್ಯ ವಿಮಾನಗಳ ಹಾರಾಟ ಆರಂಭವಾಗಲಿದೆ ಎಂದು ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಮಹೇಶ ಶರ್ಮಾ ಅವರು ಶನಿವಾರ ಹೇಳಿದ್ದಾರೆ.

‘ನಾವು ಈಗಾಗಲೇ ತಾಂತ್ರಿಕ ವಿಮಾನ ಹಾರಾಟವನ್ನು ಆರಂಭಿಸಿದ್ದೇವೆ. ಆದರೆ ಕೆಳಮಹಡಿಯಲ್ಲಿ ಇನ್ನೂ ನೀರು ತುಂಬಿಕೊಂಡಿದ್ದರಿಂದ ಮತ್ತು ಟರ್ಮಿನಲ್ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಇನ್ನೂ ವಾಣಿಜ್ಯ ವಿಮಾನ ಹಾರಾಟ ಆರಂಭಿಸಿಲ್ಲ’ ಎಂದು ಅವರು ತಿಳಿಸಿದರು.

ಇನ್ನು ಎರಡ್ಮೂರು ದಿನದಲ್ಲಿ ಚೆನ್ನೈ ವಿಮಾನ ನಿಲ್ದಾಣ ಸಂಪೂರ್ಣ ಸಹಜ ಸ್ಥಿತಿಗೆ ಬರಲಿದೆ. ಈಗ ಐಎನ್‌ಎಸ್ ರಜಲಿ ವಾಯು ನೆಲೆಯಿಂದ ನಾಲ್ಕು ವಾಣಿಜ್ಯ ವಿಮಾನಗಳು ಸಂಚಾರ ನಡೆಸುತ್ತಿವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಶತಮಾನದ ಮಹಾಮಳೆಯಿಂದಾಗಿ ಕಳೆದ ಭಾನುವಾರದಿಂದ ಚೆನ್ನೈ ವಿಮಾನ ನಿಲ್ದಾಣದ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು.

Write A Comment