ರಾಷ್ಟ್ರೀಯ

ಮೇಕ್ ಇನ್ ಇಂಡಿಯಾಗಾಗಿ ಕೋಟಿ ವೇತನದ ಆಫರ್ ತಿರಸ್ಕರಿಸಿದ ಐಐಟಿ ವಿದ್ಯಾರ್ಥಿಗಳು

Pinterest LinkedIn Tumblr

iit-newನವದೆಹಲಿ: ವಾರ್ಷಿಕವಾಗಿ ಕೋಟಿ ರು. ವರಮಾನ  ನೀಡುವ ಉದ್ಯೋಗ ಆಫರ್‌ಗಳನ್ನೂ   ಐಐಟಿಯ ನಾಲ್ವರು ಪದವೀಧರರು ತಿರಸ್ಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಕನಸನ್ನು ಸಾಕಾರಗೊಳಿಸಲು  ಸಾವಿರಗಳಲ್ಲಿ ಸಂಬಳ ನೀಡುವ ಸ್ಥಳೀಯ ಕಂಪನಿಗಳನ್ನೇ ಇವರು ಆರಿಸಿಕೊಂಡಿದ್ದಾರೆ.

ಗೂಗಲ್, ವೀಸಾ, ಒರಾಕಲ್ ಮತ್ತು ಮೈಕ್ರೋಸಾಫ್ಟ್‌ನಂಥ ದಿಗ್ಗಜ ಕಂಪನಿಗಳಿಂದ ಪ್ರತಿ ವರ್ಷವೂ ಉದ್ಯೋಗ ನೇಮಕಾತಿ ನಡೆಯಲಿದ್ದು, ಸಂಸ್ಥೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೆ ವರಮಾನ ನೀಡುವ ಕೆಲಸಗಳಿಗೆ ಆಫರ್ ನೀಡುತ್ತವೆ.

ಉತ್ತಮ ವೇತನ ನೀಡುವಂಥ ಕಂಪನಿಗಳನ್ನೇ ಅಭ್ಯರ್ಥಿಗಳೂ ಆಯ್ದುಕೊಳ್ಳುವುದು ಸಾಮಾನ್ಯ. ಆದರೆ, ವಿದೇಶಿ ಕಂಪನಿಗಳು ನೀಡಿದ ಆಫರ್‌ನ ಕೇವಲ ಐದನೇ ಒಂದು ಭಾಗದಷ್ಟು ವೇತನ ನೀಡುವಂಥ ಸ್ಥಳೀಯ ಕಂಪನಿಗಳನ್ನು ಈ ನಾಲ್ವರು ಅಭ್ಯರ್ಥಿಗಳು ಆಯ್ದುಕೊಂಡಿದ್ದಾರೆ.

ಮೋದಿ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಗಳಿಗೆ ‘ಮೇಕ್ ಇನ್ ಇಂಡಿಯಾ’ದೊಂದಿಗೆ ಕೈ ಜೋಡಿಸಲು ಪ್ರೋತ್ಸಾಹಿಸುತ್ತಿದ್ದಾರೆ. ಭಾರತದಲ್ಲಿಯೇ ಉತ್ಪಾದನೆ ಹೆಚ್ಚಿಸಿ, ಉದ್ಯೋಗ ಸೃಷ್ಟಿಸುವ ಮೂಲಕ ದೇಶದ ಪ್ರಗತಿ ಸಾಧಿಸುವುದು ಈ ಅಭಿಯಾನದ ಉದ್ದೇಶ. ಎಲ್ಲೆಡೆ ‘ಮೇಕ್ ಇಂಡಿಯಾ’ಗೆ ಕೊಡುಗೆ ನೀಡಬೇಕೆನ್ನುವ ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಾಗಿದೆ.

ಹೀಗಾಗಿ ಪ್ರತಿಭಾವಂತ ಅಭ್ಯರ್ಥಿಗಳನ್ನು ಆರಿಸಿಕೊಳ್ಳಲು ಭಾರತದ ಕಂಪನಿಗಳೂ ಆಕರ್ಷಕ ವೇತನ ಕೊಡಲು ಮುಂದಾಗಬೇಕು. ಜತೆಗೆ ಮೇಕ್ ಇನ್ ಇಂಡಿಯಾ ಯೋಜನೆಯ ನೀತಿಗಳೂ ಪ್ರತಿಭಾವಂತರನ್ನು ಪ್ರೋತ್ಸಾಹಿಸುವಂತೆ ಇರುವಂತೆ ನೋಡಿಕೊಳ್ಳುವುದು ಸರಕಾರದ ಹೊಣೆಯಾಗಿದೆ ಎಂದು ಈ ಪದವೀಧರರು ಹೇಳಿದ್ದಾರೆ.

Write A Comment