ರಾಷ್ಟ್ರೀಯ

ಮಥುರಾದಲ್ಲಿ ಅರ್ಥಪೂರ್ಣವಾಗಿ ನಡೆದ ಪತ್ರಕರ್ತರ ಸಮ್ಮೇಳನ

Pinterest LinkedIn Tumblr

patraಮಥುರಾ, ಡಿ.೫-ಕಳೆದ  ನ. ೨೯ ಹಾಗೂ ೩೦ ರಂದು ೬೫ನೇ ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಅಧಿವೇಶನವು ಮಥುರಾ ನಗರದ ಎಲ್.ಎನ್.ಮೊದಲಿಯಾರ್ ಹಾಲ್‌ನಲ್ಲಿ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆ ಸಚಿವರಾದ ಶಿವಪಾಲ್ ಯಾದವ್,ಇಂದಿನ ದಿನಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಅದನ್ನು ಪತ್ರಕರ್ತರು ಬಯಲಿಗೆಳೆಯುವ ಪ್ರಯತ್ನ ಮುಖ್ಯವಾದುದು. ರಾಷ್ಟ್ರೀಯ ಅಧ್ಯಕ್ಷ ವಿಕ್ರಮ್ ರಾವ್ ಅವರಿಗೂ ಹಾಗೂ ದೇಶದ ವಿವಿಧೆಡೆಯಿಂದ ಬಂದಂತಹ ಪತ್ರಕರ್ತರಿಗೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ ಅವರು ಮಾತನಾಡಿ, ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮಾಧ್ಯಮ ರಕ್ಷಣಾ ಇಲಾಖೆಯಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ರಾಷ್ಟ್ರೀಯ ಕಾರ್ಯದರ್ಶಿ ಮದನಗೌಡ ಮಾತನಾಡಿ, ಮುಂದಿನ ಅಧಿವೇಶನ ಕರ್ನಾಟಕದ ಆದಿಚುಂಚನಗಿರಿ ಸಂಸ್ಥಾನ ಮಠದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಕರ್ನಾಟಕ ಸರ್ಕಾರ ಹೆಲ್ತ್ ಸ್ಕೀಂನಿಂದ ಆರೋಗ್ಯ ವಿಮೆ ವ್ಯವಸ್ಥೆ ಇದ್ದು ಕುಟುಂಬದ ನಾಲ್ಕು ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಹಾಗೂ ೬೦ ವರ್ಷ ದಾಟಿದ ಪತ್ರಕರ್ತರಿಗೆ ಪಿಂಚಣಿ ವ್ಯವಸ್ಥೆ ಕೂಡ ಇದೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕರ್ನಾಟಕ ರಾಜ್ಯಾಧ್ಯಕ್ಷ ರಾಜು ಸೇರಿದಂತೆ  ೨೪ ರಾಜ್ಯಗಳಿಂದ ೧೨೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Write A Comment