ಮನೋರಂಜನೆ

ಬಿಡಬ್ಲುಎಫ್ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಸೈನಾ ನಾಮನಿರ್ದೇಶನ

Pinterest LinkedIn Tumblr

Saina

ದುಬೈ, ಡಿ.5: ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌ನ(ಬಿಡಬ್ಲುಎಫ್) ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವರ್ಷ ಕೆಲವು ಸಮಯ ವಿಶ್ವದ ನಂ.1 ಆಟಗಾರ್ತಿಯಾಗಿದ್ದ ಸೈನಾ ಸ್ಥಿರ ಪ್ರದರ್ಶನದಿಂದ ಗಮನ ಸೆಳೆದಿದ್ದರು.

ಪ್ರತಿಷ್ಠಿತ ಬಿಡಬ್ಲುಎಫ್ ಪ್ರಶಸ್ತಿಗೆ ಪ್ರಸ್ತುತ ವಿಶ್ವದ ನಂ.2ನೆ ಆಟಗಾರ್ತಿಯಾಗಿರುವ ಸೈನಾ ಅವರಲ್ಲದೆ ವಿಶ್ವದ ನಂ.1 ಆಟಗಾರ್ತಿ ಸ್ಪೇನ್‌ನ ಕ್ಯಾರೊಲಿನಾ ಮರಿನ್, ಚೀನಾದ ಝಾವೊ ಯೂನ್‌ಲಿ ಹಾಗೂ ಬಾವೊ ಯಿಕ್ಸಿನ್ ನಾಮನಿರ್ದೇಶನಗೊಂಡಿದ್ದಾರೆ. ಡಿ.7 ರಂದು ಇಲ್ಲಿನ ಅಲ್ ಬದಿಯಾ ಗಾಲ್ಫ್ ಕ್ಲಬ್‌ನಲ್ಲಿ ನಡೆಯಲಿರುವ ದುಬೈ ವರ್ಲ್ಡ್ ಸೂಪರ್ ಸರಣಿ ಫೈನಲ್ಸ್‌ನ ಆಟಗಾರರ ರಿಸೆಪ್ಶನ್ ಹಾಗೂ ಗಾಲಾ ಕಾರ್ಯಕ್ರಮದಲ್ಲಿ ಬಿಡಬ್ಲುಎಫ್ ವರ್ಷದ ಆಟಗಾರ್ತಿ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗುತ್ತದೆ.

ಸೈನಾ ಈ ವರ್ಷ ವಿಶ್ವದ ನಂ.1 ಪಟ್ಟಕ್ಕೇರಿದ ಭಾರತದ ಮೊದಲ ಆಟಗಾರ್ತಿಯಾಗಿರುವುದಲ್ಲದೆ ಈ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ದಿಲ್ಲಿಯಲ್ಲಿ ನಡೆದ ಬಿಡಬ್ಲುಎಫ್ ವರ್ಲ್ಡ್ ಸೂಪರ್ ಸಿರೀಸ್ ಟೂರ್ ಪ್ರಶಸ್ತಿಯನ್ನು ಜಯಿಸಿದ್ದ ಸೈನಾ ಬಿಡಬ್ಲುಎಫ್ ವಿಶ್ವ ಚಾಂಪಿಯನ್‌ಶಿಪ್, ಆಲ್ ಇಂಗ್ಲೆಂಡ್ ಹಾಗೂ ಥೈಹಾಟ್ ಚೀನಾ ಓಪನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು.

ಮರಿನ್ ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್, ನವೆಂಬರ್‌ನಲ್ಲಿ ಹಾಂಕಾಂಗ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದಲ್ಲದೆ ಇತರ ಮೂರು ಸೂಪರ್ ಸರಣಿ ಪ್ರಶಸ್ತಿಗಳನ್ನು ಜಯಿಸಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನ್ನು ಗೆದ್ದುಕೊಂಡಿದ್ದರು.

ಮಹಿಳೆಯರ ಡಬಲ್ಸ್ ಆಟಗಾರ್ತಿಯಾಗಿರುವ ಝಾವೊ ಈ ವರ್ಷ 8 ಸೂಪರ್ ಸರಣಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಝಾವೊ ಈ ವರ್ಷ ಆಲ್ ಇಂಗ್ಲೆಂಡ್ ಮಹಿಳಾ ಡಬಲ್ಸ್ ಕಿರೀಟ ಹಾಗೂ ಇಂಡಿಯ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ್ದರು.

ಜಲ ಪ್ರಳಯ ಸಂತ್ರಸ್ತರಿಗೆ ಸೈನಾ ಸಹಾಯ
ಹೈದರಾಬಾದ್: ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಜಲ ಪ್ರಳಯದಿಂದ ಸಂತ್ರಸ್ತ್ತರಾಗಿರುವ ತಮಿಳುನಾಡು ಜನತೆಗೆ 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಮಳೆಯಿಂದಾಗಿ ಸಂತ್ರಸ್ತ್ತರಾಗಿರುವ ಜನತೆಗೆ ಸೈನಾ 2 ಲಕ್ಷ ರೂ. ದೇಣಿಗೆ ನೀಡಲು ಬಯಸಿದಾರೆೆೆ. ನಾನು ಅದರ ವ್ಯವಸ್ಥೆ ಮಾಡುವೆ ಎಂದು ಸೈನಾರ ತಂದೆ ಹರ್‌ವೀರ್ ಸಿಂಗ್ ಹೇಳಿದ್ದಾರೆ.

Write A Comment