ಕನ್ನಡ ವಾರ್ತೆಗಳು

ಪೊಂಪಯ್ ಮಾತೆಯ ಪುಣ್ಯ ಕ್ಷೇತ್ರದಲ್ಲಿ10 ದಿನಗಳ ನೊವೆನಾ ಕಾರ್ಯಕ್ರಮ

Pinterest LinkedIn Tumblr

Ladyhill_chrh_novana_1

ಮಂಗಳೂರು,ಡಿ.05 : ನಗರದ ಉರ್ವ ಇಲ್ಲಿನ ಪೊಂಪಯ್ ಮಾತೆಯ ಪುಣ್ಯ ಕ್ಷೇತ್ರದಲ್ಲಿ ಡಿ.12 ರಂದು ನಡೆಯುವ ವಾರ್ಷಿಕ ಹಬ್ಬದ ಪ್ರಯುಕ್ತ  10 ದಿನಗಳ ಪ್ರತ್ಯೇಕ ನೊವೆನಾ ಕಾರ್ಯಕ್ರಮದ ಉದ್ಘಾಟನೆಯನ್ನು ಶುಕ್ರವಾರ ಚರ್ಚಿನಲ್ಲಿ ನಡೆಯಿತು.

ಡಿ.4 ರಿಂದ 12 ರ ವರೆಗೆ ನಡೆಯುವ ಈ ನೊವೆನಾವು ವಾರದ ಎಲ್ಲಾ ದಿನಗಳಲ್ಲಿ ಸಂಜೆ 5.30ಕ್ಕೆ ನಡೆಯಲ್ಲಿದ್ದು, ಶನಿವಾರ ಮತ್ತು ಆದಿತ್ಯವಾರ ಮಾತ್ರ ಸಂಜೆ 5 ಗಂಟೆಗೆ ನಡೆಯಲಿದೆ. ಪ್ರತಿ ದಿನ ನೊವೆನಾದ ಸಮಯದಲ್ಲಿ ಬೇರೆ ಬೇರೆ ಧರ್ಮಗುರುಗಳಿಂದ ಬೇರೆ ಬೇರೆ ವಿಷಯಗಳಲ್ಲಿ ಪ್ರಸಂಗ, ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆ, ಬಲಿಪೂಜೆ, ಹಾಗೂ ಆಶೀರ್ವಾದಗಳು ನಡೆಯಲಿದೆ. ಮುಂದೆ ಡಿಸೆಂಬರ್ 13 ರಂದು ಚರ್ಚಿನ ಮಹಾ ಹಬ್ಬ ನಡೆಯಲ್ಲಿದ್ದು, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅವರು ಬಲಿಪೂಜೆಯ ಮುಂದಾಳುವಿಕೆ ವಹಿಸಲಿದ್ದಾರೆ.

Ladyhill_chrh_novana_2Ladyhill_chrh_novana_3 Ladyhill_chrh_novana_4 Ladyhill_chrh_novana_5 Ladyhill_chrh_novana_6 Ladyhill_chrh_novana_7 Ladyhill_chrh_novana_8 Ladyhill_chrh_novana_9 Ladyhill_chrh_novana_10 Ladyhill_chrh_novana_11 Ladyhill_chrh_novana_12 Ladyhill_chrh_novana_13 Ladyhill_chrh_novana_14 Ladyhill_chrh_novana_15 Ladyhill_chrh_novana_16

ಉದ್ಘಾಟನಾ ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರುಗಳಾದ ರೆ| ಫಾ| ಸ್ಟೇನಿ ಪಿರೇರಾ, ಸಹಾಯಕ ಧರ್ಮಗುರುಗಳಾದ ರೆ| ಫಾ| ಅಮಿತ್ ರೊಡ್ರಿಗಸ್, ರೆ|ಫಾ| ಜೀವನ್ ಸಿಕ್ವೇರಾ, ರೆ| ಫಾ| ವಲೇರಿಯನ್ ರೊಡ್ರಿಗಸ್, ಉಪಾಧ್ಯಕ್ಷರಾದ- ಹಿಲರಿ ಡಿ’ಸೋಜ, ಕಾರ್ಯದರ್ಶಿಗಳಾದ ಜನಿವ್ ಮಥಾಯಸ್, ಹಿಂದಿನ ಉಪಾಧ್ಯಕ್ಷರಾದ ಕೆವಿನ್ ಮಾರ್ಟಿಸ್, ಫೋರ್ ವಿಂಡ್ಸ್ ಮಾಸ್ ಕಮ್ಯುನಿಕೇಶನ್ ಸಂಸ್ಥೆಯ ನಿರ್ದೇಶಕರಾದ ಇ.ಫೆರ್ನಾಂಡಿಸ್ ಉಪಸ್ಥಿತರಿದ್ದರು.

Write A Comment