ರಾಷ್ಟ್ರೀಯ

ರೂಪಾಯಿ ವೌಲ್ಯ2 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿತ

Pinterest LinkedIn Tumblr

Rupeeಹೊಸದಿಲ್ಲಿ, ಡಿ.4: ರೂಪಾಯಿ ವೌಲ್ಯ ಶುಕ್ರವಾರ ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಅಮೆರಿಕದಲ್ಲಿ ದರ ಏರಿಕೆಯಾಗುವ ಭೀತಿ ರೂಪಾಯಿಯ ಈ ಸ್ಥಿತಿಗೆ ಕಾರಣವಾಗಿದೆ.

ಭಾರತೀಯ ಶೇರು ಮಾರುಕಟ್ಟೆಯಲ್ಲಿನ ಕುಸಿತವೂ ರೂಪಾಯಿಗೆ ಆಘಾತವನ್ನು ನೀಡಿದೆ.

ರೂಪಾಯಿ ವೌಲ್ಯವು ಶುಕ್ರವಾರ ಡಾಲರ್‌ಗೆ 66.99ಕ್ಕೆ ಇಳಿಯಿತು. ಇದು 2013 ಸೆಪ್ಟಂಬರ್ ಬಳಿಕ ರೂಪಾಯಿಯ ಅತ್ಯಂತ ಕಳಪೆ ವೌಲ್ಯವಾಗಿದೆ.

ಗುರುವಾರ ರೂಪಾಯಿ ದರವು ಡಾಲರ್‌ಗೆ 66.65ರಲ್ಲಿ ಕೊನೆಯಾಗಿತ್ತು. ಯುರೋವನ್ನು ರೂಪಾಯಿ ನಿಕಟವಾಗಿ ಅನುಸರಿಸುತ್ತಿದ್ದು, ಅದು ಬಲಗೊಂಡ ಹಿನ್ನೆಲೆಯಲ್ಲಿ ರೂಪಾಯಿ ವೌಲ್ಯ ಕುಸಿದಿದೆ ಎನ್ನಲಾಗಿದೆ.

‘‘ಭಾರತೀಯ ರಿಸರ್ವ್ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಮಧ್ಯಪ್ರವೇಶಿಸದಿದ್ದರೆ ರೂಪಾಯಿ ಮೇಲಿನ ಒತ್ತಡ ಹಾಗೇ ಉಳಿಯುತ್ತದೆ’’ ಎಂದು ಮುಂಬೈಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿದೇಶಿ ವಿನಿಮಯ ವ್ಯವಹಾರದ ಮುಖ್ಯಸ್ಥ ಆಶುತೋಷ್ ರೈನಾ ಹೇಳುತ್ತಾರೆ.

Write A Comment