ರಾಷ್ಟ್ರೀಯ

ಎಐಸಿಸಿ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ವಿರುದ್ಧ ವಂಚನೆ ಪ್ರಕರಣ ದಾಖಲು

Pinterest LinkedIn Tumblr

diggi-new

ಭೂಪಾಲ್: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ವಿರುದ್ಧ ವಂಚನೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡಿದ ಆರೋಪದ ಮೇಲೆ ರಾಜ್ಯ ಆರ್ಥಿಕ ಅಪರಾಧಗಳ ಘಟಕ ಪ್ರಕರಣ ದಾಖಲಿಸಿದೆ.

1993ರಿಂದ 2003ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿಗ್ವಿಜಯ್ ಸಿಂಗ್, ಹಾಗೂ ಅವರ ಸಂಪುಟ ಸಹೋದ್ಯೋಗಿ ಸೇರಿ ಮೂವರು, ತಾಂತ್ರಿಕ ಶಿಕ್ಷಣ ಸಚಿವ ರಾಜಾ ಪಟೇರಿಯಾ ಜತೆಗೂಡಿ ಆರ್‌ಕೆಡಿಎಫ್ ಕಾಲೇಜಿಗೆ ವಿಧಿಸಿದ್ದ 24 ಲಕ್ಷ ರೂ.ದಂಡವನ್ನು 2.5 ಲಕ್ಷ ರೂಗೆ ಇಳಿಸಿದ್ದರು ಎಂದು ಆರೋಪಿಸಲಾಗಿದೆ,

ಇವರ ಜೊತೆಗೆ ಕಾಲೇಜಿನ ಮುಖ್ಯಸ್ಥ ಸುನೀಲ್ ಕಪೂರ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಂಚನೆ (ಸೆ.420), ನಕಲಿ ದಾಖಲೆ ಬಳಕೆ (ಸೆ.467), ಪಿತೂರಿ (ಸೆ.120 ಬಿ) ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ.

Write A Comment