ರಾಷ್ಟ್ರೀಯ

ಪ್ರತಿ ವರ್ಷ ರಸ್ತೆ ಅಪಘಾತಕ್ಕೆ ದೇಶದಲ್ಲಿ 1.5 ಲಕ್ಷ ಜನ ಬಲಿ

Pinterest LinkedIn Tumblr

nithin-gadkariನವದೆಹಲಿ:  ಪ್ರತಿವರ್ಷ ಐದು ಲಕ್ಷ ರಸ್ತೆ ಅಪಘಾತ ನಡೆಯುತ್ತಿದ್ದು, ದೇಶದಲ್ಲಿ 1.5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ತಿಳಿಸಿದ್ದಾರೆ.

ಇಷ್ಟೊಂದು ಪ್ರಮಾಣದ ಅಪಘಾತಗಳ ಫಲವಾಗಿ ದೇಶದ ಬೊಕ್ಕಸಕ್ಕೆ ವಾರ್ಷಿಕವಾಗಿ 55 ಸಾವಿರ ಕೋಟಿ ರೂ. ಹೊರೆ ಬೀಳುತ್ತಿದ್ದು, ಇದು ದೇಶದ ಜಿಡಿಪಿಯ ಶೇ.3ರಷ್ಟು ಎಂದು ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದರು.

“ಪ್ರತಿ ವರ್ಷ ದೇಶದಲ್ಲಿ ಸುಮಾರು 5 ಲಕ್ಷ ರಸ್ತೆ ಅಪಘಾತಗಳಲ್ಲಿ 1.5 ಲಕ್ಷ ಜನರು ಸಾಯುತ್ತಿದ್ದಾರೆ” ಎಂದು ಗಡ್ಕರಿ ವಿವರ ನೀಡಿದರು.

Write A Comment