ರಾಷ್ಟ್ರೀಯ

ಜಲ ಪ್ರಳಯ: ತಮಿಳುನಾಡಿನಲ್ಲಿ 269, ಆಂಧ್ರದಲ್ಲಿ 54 ಸಾವು

Pinterest LinkedIn Tumblr

channi-3ನವದೆಹಲಿ: ಶತಮಾನದ ಮಹಾಮಳೆ ಹಾಗೂ ಪ್ರವಾಹದಿಂದಾಗಿ ತಮಿಳುನಾಡಿನಲ್ಲಿ 269 ಜನ ಮೃತಪಟ್ಟಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ.

ಕುಂಭದ್ರೋಣ ಮಳೆಯಿಂದಾಗಿ ಆಂಧ್ರಪ್ರದೇಶದಲ್ಲಿ 54 ಜನ ಹಾಗೂ ಪುದುಚೇರಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ರಾಜನಾಥ್ ಸಿಂಗ್ ಅವರು ಲೋಕಸಭೆಗೆ ತಿಳಿಸಿದರು.

ಕಳೆದ ಎರಡು ದಿನಗಳಿಂದ ಚೆನ್ನೈ ಸಂಪರ್ಕಿಸುವ ಎಲ್ಲಾ ರಾಷ್ಟ್ರೀಯ ಹೆದ್ದರಾಗಿಳು ಬಂದ್ ಆಗಿದ್ದು, ಜಲ ಪ್ರಳಯದಿಂದಾಗಿ ಚೆನ್ನೈ ಅಕ್ಷರ ಸಹ ದ್ವೀಪದಂತಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯೇನಲ್ಲ ಎಂದು ಗೃಹ ಸಚಿವರು ಹೇಳಿದರು.

ಚೆನ್ನೈಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ ಎರಡ್ಮೂರು ದಿನಗಳ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ(ಎನ್‌ಡಿಆರ್‌ಎಫ್)ಯ 30 ತಂಡಗಳನ್ನು ಹಾಗೂ ಸೇನಾಪಡೆಯ ಏಳು ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದರು. ಅಲ್ಲದೆ ತಮಿಳುನಾಡು ಕೇಳಿದೆ ಎಲ್ಲಾ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಹೇಳಿದರು.

Write A Comment