ರಾಷ್ಟ್ರೀಯ

‘ಊರಿಗೆ ವಾಪಸ್ ಹೋಗಲಾಗದೆ ಬಿಸ್ಕೆಟ್ ತಿಂದು ಬದುಕುತ್ತಿದ್ದೇವೆ’

Pinterest LinkedIn Tumblr

raiinnಚನ್ನೈ, ಡಿ.3- ವಾಪಸ್ ಊರಿಗೆ ಹೋಗಲು ರೈಲೂ ಇಲ್ಲದೆ, ತಿನ್ನಲು ಆಹಾರ ಸಿಗದೆ ಕೇವಲ ಬಿಸ್ಕೆಟ್‌ನಿಂದ ಪ್ರಾಣ ಉಳಿಸಿಕೊಂಡಿದ್ದೇವೆ ಎಂದು ಕಟ್ಟಡ ಕಾರ್ಮಿಕ ಸಲೀಂ ಹೇಳಿಕೊಂಡಿದ್ದಾನೆ.

ಮೂಲತಃ ಪಶ್ಚಿಮ ಬಂಗಾಳದವನಾದ ಈತ ಕಟ್ಟಡ ಕಾರ್ಮಿಕನಾಗಿದ್ದು, ಕೆಲಸ ಅರಸಿ ಚನ್ನೈಗೆ ಬಂದಿದ್ದು, ಜನಪ್ರಳಯದಲ್ಲಿ ಸಿಲುಕಿ ತಾನು ಅನುಭವಿಸುತ್ತಿರುವ ಪರಿಪಾಟಲು ಬಗ್ಗೆ ಹೇಳಿಕೊಂಡಿದ್ದಾನೆ.

ಪೆರಂಬಕಂನಲ್ಲಿ ಕಟ್ಟಡ ಕಟ್ಟುವ ಕೆಲಸ ಮಾಡುತ್ತಿದ್ದು, ಮಳೆಯಿಂದಾಗಿ ಕೆಲಸ ನಿಂತಿದೆ. ಎರಡು ದಿನಗಳಿಂದ  ರೈಲು ನಿಲ್ದಾಣದ ಮಹಡಿಯ ಮೇಲೆ ಕಾಲ ಕಳೆಯುತ್ತಿದ್ದೇನೆ ಎಂದು ತಿಳಿಸಿದ್ದಾನೆ.

ಮಳೆಯಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದ್ದು, ಊರಿಗೆ ಹೋಗಲು ಆಗುತ್ತಿಲ್ಲ. ಹಣವೂ ಇಲ್ಲ. ತಿನ್ನಲು ಆಹಾರವಿಲ್ಲ. ಬಿಸ್ಕೆಟ್ ಹಾಗೂ ಪ್ರಾರ್ಥನೆಯಿಂದ ಬದುಕಿದ್ದೇನೆ ಎಂದು ಸಲೀಂ ತನ್ನ ಪಾಡನ್ನು ವಿವರಿಸಿದ್ದಾನೆ.

Write A Comment