ರಾಷ್ಟ್ರೀಯ

ಸಿನಿಮಾ ತಾರೆಗಳಿಗಿಂತಲೂ ಫೇಮಸ್ ಈ 4ಜಿ ಸುಂದರಿ!

Pinterest LinkedIn Tumblr

Sasha_Chettriಚೀಟಿಂಗ್ ಅಲ್ಲ, ಇದು 4 ಜಿ ಎಂದು ಹೇಳುತ್ತಾ ಜನರ ನಡುವೆ ಬರುವ ಬಾಯ್‌ಕಟ್ ಹೇರ್‌ಸ್ಟೈಲ್‌ನ ಈ ಹುಡುಗಿ ಎಲ್ಲರಿಗೂ ಚಿರಪರಿಚಿತ. ಕಾರ್ಯಕ್ರಮದ ನಡುವೆ ಪದೇ ಪದೇ ಬರುವ ಏರ್‌ಟೆಲ್ 4ಜಿ ಜಾಹೀರಾತು ಕಿರಿಕಿರಿ ಎಂದೆನಿಸಿದರೂ ಈ  ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸುಂದರಿಯನ್ನು ಯಾರೂ ಮರೆಯುವಂತಿಲ್ಲ.

ಚತುರೆ ಹಾಗೂ ತುಂಬ ಆತ್ಮವಿಶ್ವಾಸದಿಂದ ಜನರ ಮುಂದೆ ಬಂದು ಏರ್ ಟೆಲ್ 4 ಜಿ ಪ್ರಚಾರ ನಡೆಸುತ್ತಿರುವ ಈ ರೂಪದರ್ಶಿಯ ಹೆಸರು ಸಾಶಾ ಚೆಟ್ರಿ. ಉತ್ತರಾಖಂಡ ಮೂಲದ ಈಕೆ ಈಗ ಜಾಹೀರಾತು ಲೋಕದಲ್ಲಿ ಮಿಂಚುತ್ತಿದ್ದು, ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದ್ದಾಳೆ.

ಗಾಯಕಿಯಾಗಬೇಕೆಂದು ಕನಸುಕಂಡ ಸಾಶಾ ಬಂದು ಸೇರಿದ್ದು ಕಟ್ ದ ಕ್ರಾಪ್ ಏಜೆನ್ಸಿ ಮೂಲಕ ಜಾಹೀರಾತು ಲೋಕಕ್ಕೆ. 1980ರಲ್ಲಿ ಸರ್ಫ್ ಜಾಹೀರಾತಿನಲ್ಲಿ ಭಾರತೀಯರ ಮನಗೆದ್ದ ಕವಿತಾ ಚೌಧರಿಯಂತೆ ಸಾಶಾ 4ಜಿ ಜಾಹೀರಾತು ಮೂಲಕ ಜನಮನ ಗೆದ್ದಿದ್ದಾಳೆ ಅಂತಿದೆ ಜಾಹೀರಾತು ಕಂಪನಿ. ಸಾಶಾಳ ಈ ವಟವಟ ಮಾತುಗಳು ಮತ್ತು ಆತ್ಮವಿಶ್ವಾಸದ ನಿಲುವು ಜಾಹೀರಾತಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆಯಂತೆ. ಏತನ್ಮಧ್ಯೆ, ಸಿನಿಮಾ ತಾರೆಗಳಿಗಿಂತಲೂ ಸಾಶಾ ಫೇಮಸ್ ಆಗಿದ್ದಾಳೆ!

ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಇಂಡಿಯಾ (BARC) ಪ್ರಕಾರ ಸೆಪ್ಟೆಂಬರ್ 19  ಮತ್ತು ನವೆಂಬರ್ 20ರ ಅವಧಿಯಲ್ಲಿ ಸಾಶಾ ನಾಯಕಿಯಾಗಿರುವ 4ಜಿ ಜಾಹೀರಾತು 54406 ಬಾರಿ ಪ್ರಸಾರವಾಗಿದೆ. ಒಟ್ಟು 1708586 ಸೆಕೆಂಡುಗಳ ಕಾಲ ಅಂದರೆ ಎರಡು ತಿಂಗಳುಗಳಲ್ಲಿ 475 ಗಂಟೆಗಳ ಕಾಲ ಈ ಜಾಹೀರಾತು ಪ್ರಸಾರವಾಗಿದೆ.

ಮುಂಬೈನಲ್ಲಿ ಅಡ್ವಟೈಸಿಂಗ್ ಕೋರ್ಸ್ ಮುಗಿಸಿದ ನಂತರ ಕಾಪಿರೈಟರ್ ಆಗಿ ಕೆಲಸ ಮಾಡಿದ್ದ ಸಾಶಾ ಗಾಯಕಿಯೂ ಹೌದು. ಏರ್‌ಟೆಲ್ ಜಾಹೀರಾತಿಗೆ ರೂಪದರ್ಶಿ ಬೇಕೆಂದಾಗ ಅಡಿಷನ್‌ಗೆ ಹೋಗಿ ಆಯ್ಕೆಯಾದ ಸಾಶಾ, ಈ ಜಾಹೀರಾತಿಗಾಗಿ ತನ್ನ ಕೂದಲನ್ನು ಕತ್ತರಿಸಬೇಕಾಗಿ ಬಂದಿತ್ತು. ಆದರೇನಂತೆ ಬಾಯ್ ಕಟ್ ಮಾಡಿರುವ ಸಾಶಾಳ ಈ ಲುಕ್ ಎಲ್ಲರ ಗಮನ ಸೆಳೆದಿದೆ.

ಜಾಹೀರಾತಿನಲ್ಲಿ ಫೇಮಸ್ ಆದವರು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಹವಣಿಸುತ್ತಿದ್ದರೆ ಇತ್ತ, ಸಾಶಾ ಮಾತ್ರ ತನ್ನ ಹೊಸ ಮ್ಯೂಸಿಕ್ ಆಲ್ಬಂನ ತಯಾರಿಯಲ್ಲಿ ಬ್ಯುಸಿಯಾಗಿದ್ದಾಳೆ.

Write A Comment