ರಾಷ್ಟ್ರೀಯ

ಬೀಫ್ v/s ಪೋರ್ಕ್ ಫೆಸ್ಟಿವಲ್ : ಉಸ್ಮಾನಿಯಾ ವಿವಿ ಉದ್ವಿಗ್ನ

Pinterest LinkedIn Tumblr

osma-vvಹೈದರಾಬಾದ್: ಗೋಮಾಂಸ ಸೇವನೆ ವಿರುದ್ದ ರಾಜಕೀಯ ನಾಯಕರುಗಳ ಹೋರಾಟದ ಬಳಿಕ ಹೈದರಾಬಾದ್ ನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಫೋರ್ಕ್ ಫೆಸ್ಟಿವಲ್ ಆಯೋಜಿಸಲಾಗಿದೆ.

ವಿದ್ಯಾರ್ಥಿಗಳ ಒಂದು ಬಣ ಡಿ10 ರಂದು ಬೀಫ್ ಫೆಸ್ಟಿವಲ್ ಹಮ್ಮಿಕೊಂಡಿತ್ತು, ಇದು ವಿವಾದಕ್ಕೆ ಕಾರಣವಾಗಿತ್ತು. ಈಗ ಇದಕ್ಕೆ ವಿರುದ್ಧವಾಗಿ ಮತ್ತೊಂದು ಬಣ ಪೋರ್ಕ್ ಫೆಸ್ಟಿವಲ್ ಹಮ್ಮಿಕೊಳ್ಳುವ ಮೂಲಕ ಎಲ್ಲರ ಕಣ್ಣು ಕೆಂಪಾಗಿಸಿದೆ.

ಪೊರ್ಕ್ ಫೆಸ್ಟಿವಲ್ ಆಯೊಜಕ ಸೋಲಂಕಿ ಶ್ರೀನಿವಾಸ್ ಪ್ರತಿಕ್ರಿಯಿಸಿ,ಪೋರ್ಕ್ ಸೇವನೆಯಿಂದ ಜೀವನೋತ್ಸಾಹ ಹೆಚ್ಚುತ್ತದೆ. ಜತೆಗೆ ದೇಹಕ್ಕೆ ಪೂರಕವಾದ ಪೌಷ್ಠಿಕಾಂಶ ಸಿಗಲಿದೆ ಎಂದು ಪೋರ್ಕ್ ಫೆಸ್ಟಿವಲ್ ಆಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

Write A Comment