ರಾಷ್ಟ್ರೀಯ

ಜಯಲಲಿತಾ ವೈಮಾನಿಕ ಸಮೀಕ್ಷೆ: ಸಂಪರ್ಕಕ್ಕೆ ಸಿಗದ ಮೈಸೂರಿನ ಯುವಕ

Pinterest LinkedIn Tumblr

myಚೆನ್ನೈ,: ಮಹಾನಗರ ಚೆನ್ನೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಜಯಲಲಿತಾ 40 ನಿಮಿಷಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈಗೆ ಭೇಟಿ ನೀಡುತ್ತಿರುವುದರಿಂದ ಅವರಿಗೆ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸುವುದಕ್ಕೆ ಜಯಾ  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಈಗಾಗಲೇ 900 ಕೋಟಿ ರೂ. ನೆರವನ್ನು ಬಿಡುಗಡೆ ಮಾಡಿದೆ.

24 ಗಂಟೆಗಳಲ್ಲಿ 330 ಮಿಲಿಮೀಟರ್ ಮನೆ ದಾಖಲಾಗಿದೆ.  ಮುಂದಿನ 24 ಗಂಟೆಗಳಲ್ಲಿ ಮತ್ತೆ ಮಳೆಯನ್ನು ನಿರೀಕ್ಷಿಸಲಾಗಿದೆ.  ಚೆನ್ನೈನ ಪ್ರವಾಹದಲ್ಲಿ ಮೈಸೂರಿನ ಸುಧೀಂದ್ರ ಎಂಬವರು ಸಿಲುಕಿದ್ದು ಮೂರು ದಿನಗಳಿಂದ ಅವರ ಸಂಪರ್ಕ ಸಿಗುತ್ತಿಲ್ಲವೆಂದು ಅವರ ತಂದೆ, ತಾಯಿಗಳು ಹೇಳಿದ್ದಾರೆ.

ಸುಧೀಂದ್ರ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಹುಣಸೂರು ತಾಲೂಕು ಬಿಳಿಕೆರೆ ಗ್ರಾಮದ ನಿವಾಸಿಯಾಗಿದ್ದಾರೆ.  ಮಗನ ಪರಿಸ್ಥಿತಿ ತಿಳಿಯದೇ ಪೋಷಕರು ಆತಂಕಗೊಂಡಿದ್ದಾರೆ.  ಚೆನ್ನೈನ ಮನೆಗಳಲ್ಲಿ ಪ್ರವಾಹದಿಂದ ಸಿಕ್ಕಿಬಿದ್ದಿರುವ ಸಂತ್ರಸ್ತರಿಗೆ ಹೆಲಿಕಾಪ್ಟರ್‌ಗಳ ಮೂಲಕ ಆಹಾರ ಪೊಟ್ಟಣಗಳನ್ನು ಎಸೆಯಲಾಗುತ್ತಿದೆ.

Write A Comment