ರಾಷ್ಟ್ರೀಯ

ಚೆನ್ನೈ ನಗರ ಅಕ್ಷರಶಃ ದ್ವೀಪದಂತಾಗಿದೆ: ರಾಜನಾಥ್ ಸಿಂಗ್

Pinterest LinkedIn Tumblr

rajನವದೆಹಲಿ: ಚೆನ್ನೈನಲ್ಲಿರುವ ಪ್ರವಾಹ ಪ್ರಕೋಪ ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದು ಚೆನ್ನೈ ನಗರ ಅಕ್ಷರಶಃ ದ್ವೀಪದಂತಾಗಿದೆ ಎಂದು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪ್ರವಾಹ ಪ್ರಕೋಪ ಪರಿಹಾರಕ್ಕೆ ಕೇಂದ್ರ ಸರಕಾರ ತಮಿಳುನಾಡು ಸರಕಾರಕ್ಕೆ ಅಗತ್ಯವಾದ ಎಲ್ಲಾ ನೆರವು ನೀಡಲಿದೆ. ಪ್ರಧಾನಿ ಮೋದಿ  ಆರಂಭದಲ್ಲಿ 940 ಕೋಟಿ ರೂಪಾಯಿಗಳ ನೆರವು ನೀಡಿದ್ದು, ಇಂದು 1 ಸಾವಿರ ಕೋಟಿ ರೂಪಾಯಿಗಳನ್ನು ಘೋಷಿಸಿರುವುದಾಗಿ ತಿಳಿಸಿದ್ದಾರೆ.

ಚೆನ್ನೈ ನಗರ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಿಂದ ಸಂಪರ್ಕ ಕಡಿತಗೊಂಡಿದ್ದರಿಂದ ದ್ವೀಪದಂತಾಗಿದೆ ಎಂದು ಆತಂಕ ವ್ಯಕ್ತಪಡಿಲಿದ್ದಾರೆ.

ಕಳೆದ ಡಿಸೆಂಬರ್ 2 ರಂದು 330 ಮಿಮಿ ಮಳೆಯಾಗಿದ್ದರಿಂದ ಚೆನ್ನೈ ನಗರದ ಬಹುಚೇಕ ಸಬ್‌ವೇಗಳಲ್ಲಿ ನೀರು ತುಂಬಿಕೊಂಡು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಹೇಳಿದ್ದಾರೆ.

ತಮಿಳುನಾಡಿನಲ್ಲಿ ವರುಣನ ಪ್ರಕೋಪದಿಂದ ಸುಮಾರು 269 ಜನತೆ ಸಾವನ್ನಪ್ಪಿದ್ದಾರೆ. ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ 54 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.

Write A Comment