ರಾಷ್ಟ್ರೀಯ

ಸುಪ್ರೀಂ ಮುಖ್ಯನ್ಯಾಯಮೂರ್ತಿಯಾಗಿ ಟಿ.ಎಸ್. ಠಾಕೂರ್ ಪ್ರಮಾಣ

Pinterest LinkedIn Tumblr

SC______________________

ಹೊಸದಿಲ್ಲಿ, ಡಿ.3: ಭಾರತದ 43ನೆ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ತೀರಥ್ ಸಿಂಗ್ ಠಾಕೂರ್ ಗುರುವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಂದ ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ನ ಅತಿ ಹಿರಿಯ ನ್ಯಾಯಾಧೀಶ 63 ವರ್ಷದ ಠಾಕೂರ್ ನಿರ್ಗಮನ ಮುಖ್ಯ ನ್ಯಾಯಾಧೀಶ ನ್ಯಾ. ಎಚ್.ಎಲ್. ದತ್ತು ಅವರಿಂದ ಅಧಿಕಾರ ವಹಿಸಿಕೊಂಡರು. ನ್ಯಾ. ದತ್ತು ಬುಧವಾರ ನಿವೃತ್ತರಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ನಡೆದ ಬೆಟ್ಟಿಂಗ್ ಮತ್ತು ಸ್ಪಾಟ್-ಫಿಕ್ಸಿಂಗ್ ಹಗರಣದ ವಿಚಾರಣೆ ನಡೆಸಿದ್ದ ನ್ಯಾ. ಠಾಕೂರ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಬಿಸಿಸಿಐಯನ್ನು ಸುಧಾರಣೆಯ ಹಾದಿಗೆ ತರುವ ಉದ್ದೇಶದ ತೀರ್ಪು ನೀಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪೂರ್ವ ಭಾರತದಲ್ಲಿ ನಡೆದ ಬಹುಕೋಟಿ ಶಾರದಾ ಚಿಟ್‌ಫಂಡ್ ಹಗರಣದ ಬಗ್ಗೆ ತನಿಖೆಗೆ ನ್ಯಾ. ಠಾಕೂರ್ ನೇತೃತ್ವದ ವಿಭಾಗ ಪೀಠವೊಂದು ಆದೇಶ ನೀಡಿತ್ತು.

1952 ಜನವರಿ 4ರಂದು ಜನಿಸಿದ ಅವರು ಒಂದು ವರ್ಷ ಒಂದು ತಿಂಗಳು ಅಧಿಕಾರಾವಧಿ ಹೊಂದಲಿದ್ದಾರೆ. 2017 ಜನವರಿ 4ರಂದು ಅವರು ನಿವೃತ್ತರಾಗಲಿದ್ದಾರೆ.

Write A Comment