ಮನೋರಂಜನೆ

ಕ್ರಿಕೆಟ್ ದಿಗ್ಗಜರ ಗುಣಗಾನ ಮಾಡಿದ ವೀರೇಂದ್ರ ಸೆಹ್ವಾಗ್

Pinterest LinkedIn Tumblr

viru-m

ನವದೆಹಲಿ, ಡಿ.3: ನನ್ನ ಕ್ರಿಕೆಟ್ ವೃತ್ತಿಯಲ್ಲಿ ಮಹತ್ತರ ಹಂತಕ್ಕೆ ತಲುಪಲು ಸಹಕರಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದು ವೀರೇಂದ್ರ ಸೆಹ್ವಾಗ್ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಪಂದ್ಯದ ವೇಳೆ ಬಿಸಿಸಿಐ ನ ಸೆಕ್ರೆಟರಿ ಅನುರಾಗ್ ಠಾಕೂರ್ ರವರಿಂದ ಟ್ರೋಫಿ ಹಾಗೂ ನೆನಪಿನ ಕಾಣಿಕೆಯನ್ನು ಪಡೆದ ನಂತರ ಸೆಹ್ವಾಗ್ ಮಾತನಾಡಿದರು.

ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದುದ್ದಕ್ಕೂ ನನ್ನ ಏಳಿಗೆಗೆ ಸಹಕರಿಸಿದ ದಿಗ್ಗಜರಾದ ಅಜಯ್ ಜಡೇಜಾ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್‌ಕುಂಬ್ಳೆ , ಮಾಸ್ಟರ್ ಬ್ಲಾಸ್ಟರ್ ಸಚಿನ್‌ತೆಂಡೂಲ್ಕರ್‌ರಿಗೆ ಅಭಿನಂದನೆ ಸಲ್ಲಿಸಿದರಾದರೂ ಎರಡು ವಿಶ್ವಕಪ್ ಗೆದ್ದು ಭಾರತ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ದ ಮಹೇಂದ್ರಸಿಂಗ್ ಧೋನಿ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಲಿಲ್ಲ. ಇದೇ ಸಂದರ್ಭದಲ್ಲಿ ಸೆಹ್ವಾಗ್ ಬಿಸಿಸಿಐನ ಎಲ್ಲಾ ಸದಸ್ಯರಿಗೂ , ತಮ್ಮ ಮೊದಲ ತರಬೇತುದಾರರಾದ ಎ.ಎನ್.ಶರ್ಮಾ, ಸತೀಶ್‌ಶರ್ಮಾ, ದೆಹಲಿ-19ರ ಕೋಚ್ ರಾಜುಶರ್ಮಾರಿಗೂ ಧನ್ಯವಾದ ಸಲ್ಲಿಸಿದರು.

104 ಟೆಸ್ಟ್ ಆಡಿರುವ ಸೆಹ್ವಾಗ್ 8586, 251 ಏಕದಿನ ಪಂದ್ಯಗಳಿಂದ 8273 ರನ್, 19 ಟ್ವೆಂಟಿ-20 ಪಂದ್ಯಗಳಾಡಿ 394 ರನ್‌ಗಳನ್ನು ಗಳಿಸಿ ತಂಡದಲ್ಲಿ ಅಗ್ರಮಾನ್ಯ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದರು.
ಈ ಅಭಿನಂದನಾ ಸಮಾರಂಭದ ವೇಳೆ ವೀರೇಂದ್ರ ಸೆಹ್ವಾಗ್‌ರ ತಾಯಿ, ಪತ್ನಿ ಹಾಗೂ ಪುತ್ರ ಪಾಲ್ಗೊಂಡಿದ್ದರು.

Write A Comment