ರಾಷ್ಟ್ರೀಯ

ದುರುದ್ದೇಶದಿಂದ ನನ್ನ ಕುಟುಂಬದ ವಿರುದ್ಧ ಕೇಂದ್ರದ ದಾಳಿ: ಚಿದಂಬರಂ

Pinterest LinkedIn Tumblr

chidu-1ನವದೆಹಲಿ: ಕೇಂದ್ರ ಸರ್ಕಾರ ದುರುದ್ದೇಶದಿಂದ ನನ್ನ ಕುಟುಂಬದ ವಿರುದ್ಧ ದಾಳಿ ನಡೆಸುತ್ತಿದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಮಂಗಳವಾರ ಆರೋಪಿಸಿದ್ದಾರೆ. ಅಲ್ಲದೆ ಒಂದು ವೇಳೆ ನನ್ನನ್ನು ಟಾರ್ಗೆಟ್ ಮಾಡುವುದಾದರೆ ನೇರವಾಗಿ ಮಾಡಿ. ಆದರೆ ನನ್ನ ಪುತ್ರನ ಸ್ನೇಹಿತರಿಗೆ ಕಿರುಕುಳ ಕೊಡಬೇಡಿ ಎಂದಿದ್ದಾರೆ.

ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ ಸಂಬಂಧ ತಮ್ಮ ಪುತ್ರ ಕಾರ್ತಿ ಅವರ ಕೆಲವು ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಚಿವ, ‘ಕೇಂದ್ರ ಸರ್ಕಾರ ಒಂದು ವೇಳೆ ನನ್ನನ್ನು ಗುರಿಯಾಗಿಸಿಕೊಳ್ಳುವುದಾದರೆ, ಅದನ್ನು ನೇರವಾಗಿಯೇ ಮಾಡಲಿ. ಆದರೆ ರಾಜಕೀಯೇತರವಾಗಿ ಉದ್ಯಮದಲ್ಲಿ ತೊಡಗಿರುವ ನನ್ನ ಪುತ್ರ ಕಾರ್ತಿ ಸ್ನೇಹಿತರಿಗೆ ಕಿರುಕುಳ ಕೊಡಬೇಡಿ’ ಎಂದಿದ್ದಾರೆ.

‘ಸರ್ಕಾರದ ದುರುದ್ದೇಶಪೂರಿತ ದಾಳಿಯನ್ನು ಎದುರಿಸಲು ನಾನು ಮತ್ತು ನನ್ನ ಕುಟುಂಬ ಸಿದ್ಧವಾಗಿದೆ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

‘ಈಗ ಸರ್ಕಾರ ಟಾರ್ಗೆಟ್ ಮಾಡಿರುವ ಯಾವುದೇ ಸಂಸ್ಥೆಯಲ್ಲಿ ನನ್ನ ಕುಟುಂಬದ ಸದಸ್ಯರು ಯಾವುದೇ ಷೇರು ಅಥವಾ ಆರ್ಥಿಕ ಆಸಕ್ತಿ ಹೊಂದಿಲ್ಲ ಎಂದು ಪದೇಪದೆ ಸ್ಪಷ್ಟಪಡಿಸುತ್ತಿದೆ’ ಎಂದು ಹೇಳಿದ್ದಾರೆ.

Write A Comment