ರಾಷ್ಟ್ರೀಯ

ಆತ್ಮೀಯ ಹಸ್ತಲಾಘವ ಮಾಡಿದ ಮೋದಿ- ಖರ್ಗೆ ! ಸದನದಲ್ಲಿ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದ ಘಟನೆ….ಮುಂದೆ ಏನಾಯಿತು …ಇಲ್ಲಿದೆ ಓದಿ..

Pinterest LinkedIn Tumblr

modi_naqvi_naidu

ನವದೆಹಲಿ: ಆ ಅಪರೂಪದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಲಿಲ್ಲ. ಆದರೆ, ಸಂಸತ್ ಅಧಿವೇಶನದ ಶುಕ್ರವಾರದ ಕಲಾಪ ಮುಂದೂಡಿಕೆಯಾದ ಬಳಿಕದ 10 ನಿಮಿಷಗಳು ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಂತೂ ಸತ್ಯ.

ಆಡಳಿತ ಪಕ್ಷ ಬಿಜೆಪಿಯು ಹಿಂದೆಂದೂ ಕಂಡಿರದಂತೆ ಪ್ರತಿಪಕ್ಷಗಳೊಂದಿಗೆ ಸ್ನೇಹಹಸ್ತ ಚಾಚಿದ್ದು ಅಲ್ಲಿಸೇರಿದ್ದವರು ಹುಬ್ಬೇರಿಸುವಂತೆ ಮಾಡಿತು. ಸಂಜೆ 6.17ಕ್ಕೆ ಕಲಾಪ ಮುಂದೂಡಿಕೆಯಾಯಿತು. ಆಗಷ್ಟೇ ಸಂವಿಧಾನಕ್ಕೆ ಸಂಬಂಧಿಸಿ ನಡೆದ ಎರಡು ದಿನಗಳ ಚರ್ಚೆ ತೆರೆಕಂಡಿತ್ತು. ಸ್ಪೀಕರ್ ತಮ್ಮ ಕಚೇರಿಗೆ ವಾಪಸಾದರು.

kharge

ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಅಲ್ಲೇ ಇದ್ದರು. ಅದೂ ಪ್ರತಿಪಕ್ಷಗಳ ಸದಸ್ಯರೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯುತ್ತಾ… ಆವೋ ಹಾಥ್ ಮಿಲಾಯಿಯೇ: ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯ ಸಿಬ್ಬಂದಿಯೊಂದಿಗೆ ಏನನ್ನೋ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಖರ್ಗೆ ಅವರ ಬಳಿ ಬಂದು, “ಖರ್ಗೇ ಜೀ ಆವೋ ನಾ, ಹಾಥ್ ಮಿಲಾಯಿಯೇ”(ಖರ್ಗೆಯವರೇ ಬನ್ನಿ, ಹಸ್ತಲಾಘವ ಮಾಡೋಣ) ಎಂದರು. ಖರ್ಗೆ ಒಂದು ಕ್ಷಣ ದಂಗಾದರು. ಮುಜುಗರದಿಂದ ನೋಡಿದ ಖರ್ಗೆಯವರಿಗೆ ಮತ್ತೊಮ್ಮೆ ನಾಯ್ಡುಇದೇ ಕೋರಿಕೆ ಸಲ್ಲಿಸಿದರು.

ತಕ್ಷಣ ಮುಂದೆ ಬಂದ ಖರ್ಗೆ ಅವರು, “ಚಲೋ, ದಿಲ್ ಮಿಲೇ ನಾ ಮಿಲೇ, ಹಾಥ್ ತೋ ಮಿಲಾಯೇಂಗೆ”(ಬನ್ನಿ, ಹೃದಯ-ಹೃದಯ ಬೆರೆಯುತ್ತದೋ, ಇಲ್ಲವೋ, ಕೈಯನ್ನಾದರೂ ಜೋಡಿಸೋಣ) ಎನ್ನುತ್ತಾ ಪ್ರಧಾನಿ ಮೋದಿಯವರತ್ತ ನಡೆದರು. ಅಷ್ಟರಲ್ಲೇ, ಮೋದಿ ಅವರೂ ಕೈಗಳನ್ನು ಮುಂದೆ ಮಾಡುತ್ತಾ ಖರ್ಗೆಯತ್ತ ಹೆಜ್ಜೆಯಿಟ್ಟಿದ್ದರು. ಇಬ್ಬರು ನಾಯಕರೂ ಪರಸ್ಪರ ಹಸ್ತಲಾಘವ ಮಾಡಿಕೊಂಡರು.

ನಮ್ಮದು ಮ್ಯಾಚಿಂಗ್ ಡ್ರೆಸ್: ಮೋದಿ-ಖರ್ಗೆಯವರನ್ನು ನೋಡಿದ ಕೇಂದ್ರ ಸಚಿವ ರಾಮïಕೃಪಾಳ್ ಯಾದವ್ ಅವರು, “ಕೈಕುಲುಕಿದ್ದಾಯಿತಲ್ಲ, ಇನ್ನು ಪರಸ್ಪರ ಆಲಿಂಗಿಸಿಕೊಳ್ಳಿ” ಎಂಬ ಸಲಹೆ ನೀಡಿದರು. ಅದನ್ನು ಖರ್ಗೆ ನಯವಾಗಿ ತಿರಸ್ಕರಿಸಿದರು. ಆಗ ಪ್ರಧಾನಿ ಮೋದಿ ಅವರು, “ಅಂದ ಹಾಗೆ, ನಾವಿಬ್ಬರೂ ಇವತ್ತು ಮ್ಯಾಚಿಂಗ್ ಬಟ್ಟೆ ಧರಿಸಿದ್ದೇವೆ” ಎಂದರು. ಖರ್ಗೆ ಹಾಗೂ ಮೋದಿ ಅವರು ಬಿಳಿ ಬಣ್ಣದ ಜಾಕೆಟ್ ಧರಿಸಿದ್ದರು.

ಈ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ, ಉಪಾಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಪಕ್ಷದ ನಾಯಕರು ಸದನದಿಂದ ತೆರಳಿಯಾಗಿತ್ತು. ಪ್ರತಿಪಕ್ಷದ ಸಾಲಲ್ಲಿ ಖರ್ಗೆ ಅವರೊಬ್ಬರೇ ಉಳಿದಿದ್ದರು. ಇದಕ್ಕೂ ಮೊದಲೂ, ಪ್ರಧಾನಿ ಮೋದಿ ಎಲ್ಲರೊಂದಿಗೆ ಬಹಳ ಆತ್ಮೀಯವಾಗಿ ನಡೆದುಕೊಂಡಿದ್ದು ಕಂಡುಬಂತು.

ಯಾವತ್ತೂ ಎಲ್ಲರೊಂದಿಗೂ ಅಂತರ ಕಾಯ್ದುಕೊಳ್ಳುತ್ತಿದ್ದ ಮೋದಿ, ಶುಕ್ರವಾರ ಸದನದೊಳಗೆ ಹಲವಾರು ಸಂಸದರ ಕೈಕುಲುಕಿದರು. ಕರ್ನಾಟಕದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಹತ್ತಿರ ಬಂದಾಗ, ಮೋದಿ ಅವರು, ಬಿಎಸ್‍ವೈ ಬೆನ್ನನ್ನು ತಟ್ಟಿದರಲ್ಲದೆ, ಹೆಗಲ ಮೇಲೆ ಕುಳಿತಿದ್ದ ಕೀಟವೊಂದನ್ನು ಓಡಿಸಿದ್ದೂ ಕಂಡುಬಂತು. ಬಳಿಕ ಎಸ್ಪಿ ನಾಯಕ ಮುಲಾಯಂರೊಂದಿಗೂ ಹಸ್ತಲಾಘವ ಮಾಡಿದರು.

Write A Comment