ಕನ್ನಡ ವಾರ್ತೆಗಳು

ಕರ್ನಾಟಕ ರಾಜ್ಯ ಕೊಂಕಣಿ ಮಹಿಳಾ ಸಾಹಿತ್ಯ ಸಂಸ್ಕೃತಿ ಸಮ್ಮೇಳನ-2015

Pinterest LinkedIn Tumblr

ಉಡುಪಿ : ಕೊಂಕಣಿ ಭಾಷೆಯೂ ಹಿಂದಿನ ಕಾಲದಿಂದಲೂ ಶ್ರೀಮಂತವಾದ ಪರಂಪರೆ ಹೊಂದಿದ್ದು,ಭಾರತದಲ್ಲಿ ಮಾನ್ಯತೆ ಪಡೆದಿರುವ 24 ಭಾಷೆಯಲಿ ಕೊಂಕಣಿ ಭಾಷೆಯೂ ಒಂದು ಹಾಗೂ ವಿಶೇಷವಾದ ಸ್ಥಾನ ಮಾನವನ್ನು ಕಾಪಾಡಿಕೊಂಡು ಬಂದಿದ್ದೆ ಎಂದು ಕೊಂಕಣಿ ಮಹಿಳಾ ಸಾಹಿತ್ಯ ಸಂಸ್ಕೃತಿ ಸಮೇಳನದ ಅಧ್ಯಕ್ಷರಾದ ಪಧ್ಮಾ ಶೈಣೈ ತಿಳಿಸಿದ್ದರು.

State_Konkani sammelana_UDP

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಕಾಸರಗೋಡು ಚಿನ್ನಾ ರವರ ಇವರ ಸಾರಥ್ಯದಲ್ಲಿ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾದ ಕರ್ನಾಟಕ ರಾಜ್ಯ ಕೊಂಕಣಿ ಮಹಿಳಾ ಸಾಹಿತ್ಯ ಸಂಸ್ಕೃತಿ ಸಮ್ಮೇಳನ 2015 ಉದ್ಘಾಟಿಸಿ ಮಾತನಾಡಿದರು.ಇಂದು ನಾವು ನಮ್ಮ ಪರಂಪರೆ ಮರೆಯುತ್ತಿದ್ದೇವೆ ಮನುಷ್ಯ ತಾನು ಬದುಕುದಕ್ಕಾಗಿ ಇತರರನ್ನು ಕೊಲ್ಲುವ ಹಂತಕ್ಕೆ ತಲುಪಿದ್ದಾನೆ,ದೇಶದಲ್ಲಿ ಹೆಚ್ಚಾಗುತ್ತಿರುವ ಉಗ್ರವಾದ,ಪ್ರತಿ ಕ್ಷೇತ್ರದಲೂ ಮೋಸ ವಂಚನೆಯಿಂದ ಕೂಡಿದೆ.ಮಕ್ಕಳು ತಿನ್ನುವ ಆಹಾರದಲ್ಲೂ ಕಲುಷಿತವಾಗಿದೆ. ಶಾಲೆ ಮಗುವಿಗೆ ವಿಷಯ ಜ್ಙಾನ ನೀಡುತ್ತದೆ ಆದರೆ ಮನೆಯಲ್ಲಿ ನೈತಿಕತೆ,ಸಂಪ್ರದಾಯ,ಆಚರ-ವಿಚಾರ ಧಾರೆಯನ್ನು ನೀಡುತ್ತದೆ.ಕೊಂಕಣಿ ಭಾಷೆಯಲ್ಲಿ ಸ್ರೀ ಸಾಹಿತ್ಯಕ್ಕೆ ಅಪಾರವಾದ ಪೋತ್ಸಾಹ ಸಿಕ್ಕಿದೆ.ಮುಂದಿನ ದಿನದಲಿ ಇದೇ ತರಹ ಸಾಹಿತ್ಯಕ್ಕೆ ಪೋತ್ಸಾಹ ಸಿಗಲಿ ಎನ್ನುವ ಆಶೆ ವ್ಯೆಕ್ತಪಡಿಸಿದ್ದರು.

ಸಮ್ಮೇಳನದ ಅಂಗವಾಗಿ ಛಾಯಾ ಚಿತ್ರ ಪ್ರದರ್ಶನ,ಕೊಂಕಣಿ ತಿಂಡಿ ತಿನಿಸು ,ಪುಸ್ತಕ ಪ್ರದರ್ಶನವನ್ನು ಖ್ಯಾತ ಚಲನ ಚಿತ್ರ ನಟಿ ಕು.ಐಶ್ವರ್ಯಾ ನಾಗ್ ಉದ್ಘಾಟಿಸಿದ್ದರು.

ವಂದಾನ ಶ್ಯಾನುಭೋಗ್ ಮಂಗಳೂರು (ಕ್ರೀಡೆ),ಶ್ರೀಮತಿ ಮಾಲತಿ ಸಾಗರ್(ನಾಟಕ)ಶ್ರೀಮತಿವಿದುಷಿ ರಾಜ ಶ್ರೀ ಶೆಣೈ ಉಳ್ಳಲ (ನೃತ್ಯ),ಶ್ರೀಮತಿ ಅನುರಾಧ ಧಾರೇಶ್ವರ್ ಧಾರವಾಡ (ಸಂಗೀತ) ವಿವಿಧ ಕ್ಷೇತ್ರದಲಿ ಸಾಧನೆ ಮಾಡಿದ ಕೊಂಕಣಿ ಮಾತೃ ಭಾಷೆಯನ್ನಾಡುವ ಪ್ರತಿಭಾನ್ವಿತ ಕೊಂಕಣಿ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡಿದರು.

ಪರ್ಯಾಯ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀಶ್ರೀ ವಿದ್ಯಾವಲ್ಲಭ ತೀರ್ಧ ಸ್ವಾಮೀಜಿಯವರು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾದ ಸಾಂಸ್ಕೃತಿಕ ಜಾಥಾವನ್ನು ಉದ್ಘಾಟಿಸಿದರು.ಜಾಥದಲ್ಲಿ ರಾಜ್ಯದ ವಿವಿಧ ಭಾಗದ ಕೊಂಕಣಿ ಜಾನಪದ ತಂಡಗಳು ಮತ್ತು ಸಾಹಿತ್ಯ ಹಾಗೂ ಕವಿ ಗೋಷ್ಠಿಯಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಡಾ.ಶಾಲಿನಿ ಪ್ರಭು ಸಾಹಿತಿ ಬೆಂಗಳೂರು, ನೀತು, ಕೆ.ಎಸ್.ಡಿ.ಎಲ್.ಅಧ್ಯಕ್ಷರಾದ,ಜೆಟ್ ಏರ್ವೇಸ್‌ನ ಪೈಲೆಟ್ ಶ್ರೀಮತಿ ಸ್ವಾತಿ ಶವಡೆ,ಖ್ಯಾತ ಡಾ.ಲಾವಣ್ಯಾ ಶ್ಯಾನುಭೋಗ್, ಮುಂತಾದ ಗಣ್ಯರು ಉಪಸ್ಥಿತರು.

ಪ್ರಾರ್ಥನೆಯನ್ನು ಶ್ರೀಮತಿ ರಾಧಿಕಾ ಆರ್ .ಭಟ್ ಮತ್ತು ಶ್ರೀಮತಿ ಭಾಗ್ಯಾ .ಕೆ.ಭಟ್,ಸ್ವಾಗತವನ್ನು ಸಮಾವೇಶದ ಪ್ರಧಾನ ಕಾರ್‍ಯದರ್ಶಿ ಲಕ್ಷ್ಮಿ ಎಸ್.ರಾವ್ ನಡೆಸಿದರು, ಸ್ಮಿತಾ ಶೆಣೈ ಹಾಗೂ ಡಾ.ವಿಜಯ ಲಕ್ಷ್ಮಿ ನಾಯಕ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

Write A Comment