ರಾಷ್ಟ್ರೀಯ

ಮತ್ತೊಂದು ಭರವಸೆ ಈಡೇರಿಸಿದ ನಿತೀಶ್‌: ಉಚಿತ ವಿದ್ಯುತ್ ಸಂಪರ್ಕ ಘೋಷಣೆ

Pinterest LinkedIn Tumblr

nitishಪಾಟ್ನಾ: ಮತ್ತೊಂದು ಚುನಾವಣೆ ಭರವಸೆ ಈಡೇರಿಸಲು ನಿರ್ಧರಿಸಿರುವ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಂಬರುವ 2017ರ ವೇಳೆಗೆ ಬಿಹಾರ್‌ನಲ್ಲಿರುವ ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ಸಂಪರ್ಕ ನೀಡುವಂತೆ ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಿತೀಶ್ ಕುಮಾರ್, ಏಳು ಭರವಸೆಗಳನ್ನುಜನತೆಗೆ ನೀಡಿದ್ದು ಈಗಾಗಲೇ ಒಂದು ಮದ್ಯ ನಿಷೇಧಕ್ಕೆ ಆದೇಶಿಸಿ ಭರವಸೆಯನ್ನು ಈಡೇರಿಸಿದ್ದಾರೆ. ಇದೀಗ ಉಚಿತ ವಿದ್ಯುತ್ ಸಂಪರ್ಕ ಭರವಸೆಯನ್ನು ಜಾರಿಗೊಳಿಸಲು ಆದೇಶಿಸಿದ್ದಾರೆ.

ಪ್ರತಿಯೊಂದು ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗುವುದು. ಆದರೆ, ಗ್ರಾಹಕರು ತಾವು ಬಳಸುವ ವಿದ್ಯುತ್‌ಗೆ ಬಿಲ್ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶದಿಂದ ಸರಕಾರದ ಬೊಕ್ಕಸಕ್ಕೆ 1500-1800 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ ಬಡತನದ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಉಚಿತ ವಿದ್ಯುತ್ ಸಂಪರ್ಕ ಘೋಷಿಸಲಾಗಿತ್ತು. ಇದೀಗ ಬಡತನದ ರೇಖೆಗಿಂತ ಮೇಲಿರುವ 50-60 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲು ನಿರ್ಧರಿಸಲಾಗಿದೆ.

Write A Comment