ರಾಷ್ಟ್ರೀಯ

ಬೆಡ್‌ರೂಮ್‌ನಲ್ಲಿ ಏನಾಗ್ತಿದೆ ಎಂದು ಕೇಳುವ ಹಕ್ಕು ಯಾರಿಗೂ ಇಲ್ಲ: ಸಾನಿಯಾ ಮಿರ್ಜಾ

Pinterest LinkedIn Tumblr

saniyaನವದೆಹಲಿ: ಸಾರ್ವಜನಿಕ ವ್ಯಕ್ತಿಯಾಗಿದ್ದೇನೆ ಎನ್ನುವ ಏಕೈಕ ಕಾರಣಕ್ಕೆ ನನ್ನ ಬೆಡ್‌ರೂಮ್‌ನಲ್ಲಿ ಏನು ನಡೆಯುತ್ತದೆ ಎಂದು ಕೇಳುವ ಹಕ್ಕು ಯಾರಿಗೂ ಇಲ್ಲ ಎಂದು ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗುಡುಗಿದ್ದಾರೆ.

ಮಾಧ್ಯಮಗಳ ವರದಿಗಾರರು, ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದರಿಂದ ಸಿಡಿಮಿಡಿಗೊಂಡ ಸಾನಿಯಾ, ಪತ್ರಕರ್ತರು ನನ್ನ ವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು ಸೂಕ್ತ. ವೈಯಕ್ತಿಕ ವಿಷಯಗಳ ಬಗ್ಗೆ ಆಸಕ್ತಿ ತೋರುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

ನನಗೆ ಯಾರಾದರೂ ಇಂತಹ ಪ್ರಶ್ನೆಗಳನ್ನು ಕೇಳಿದಲ್ಲಿ ಅಗೌರವ ತೋರಿದಂತಾಗುತ್ತದೆ. ಕೇವಲ ಸೆಲೆಬ್ರೆಟಿ ಆಗಿದ್ದೇನೆ ಎನ್ನುವ ಕಾರಣಕ್ಕೆ  ನನ್ನ ಬೆಡ್‌ರೂಮ್‌ನಲ್ಲಿ ಏನು ನಡೆಯುತ್ತದೆ ಎಂದು ಕೇಳುವುದು ಸರಿಯಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಸಾನಿಯಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ, ವರ್ಷಾಂತ್ಯಕ್ಕೆ ಡಬಲ್ಸ್ ವಿಭಾಗದಲ್ಲಿ ವಿಶ್ವದಲ್ಲಿಯೇ ನಂಬರ್ ಒನ್ ಸ್ಥಾನ ಪಡೆದಿದ್ದಾರೆ

Write A Comment