ರಾಷ್ಟ್ರೀಯ

ಸಂವಿಧಾನ ಮರುಪರಿಶೀಲಿಸಿದರೆ ರಕ್ತಪಾತ: ಖರ್ಗೆ ಎಚ್ಚರಿಕೆ

Pinterest LinkedIn Tumblr

mallikarjun-kharge

ಹೊಸದಿಲ್ಲಿ, ನ.26:ಗುರುವಾರ ಲೋಕಸಭೆಯಲ್ಲಿ ವಿವಾದಾತ್ಮಕ ಹೇಳಿಕೆಯೊಂದರಲ್ಲಿ ಹಿರಿಯ ಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು, ಮೋದಿ ಸರಕಾರವು ಸಂವಿಧಾನದ ಮರು ವಿಮರ್ಶೆಗೆ ಮುಂದಾದರೆ ರಕ್ತಪಾತ ಸಂಭವಿಸಲಿದೆ ಎಂದು ಗುಡುಗಿದ್ದಾರೆ. ಅದರ ಬೆನ್ನಿಗೇ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಖರ್ಗೆ ಬಳಸಿದ ‘ರಕ್ತ ಪಾತ’ ಶಬ್ದವನ್ನು ಕಡತದಿಂದ ಅಳಿಸುವಂತೆ ಆದೇಶಿಸಿದರು.

ಮೂಲ ಸಂವಿಧಾನದಲ್ಲಿ ‘ಜಾತ್ಯತೀತ ‘ಶಬ್ದವೇ ಇರಲಿಲ್ಲ ಎಂಬ ಗೃಹಸಚಿವ ರಾಜನಾಥ ಸಿಂಗ್ ಅವರ ಹೇಳಿಕೆ ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದಾಗ ಎದ್ದು ನಿಂತ ಖರ್ಗೆ, ಸಂವಿಧಾನವನ್ನು ಬದಲಿಸಲು ಸರಕಾರವು ಮುಂದಾದರೆ ರಕ್ತಪಾತವಾಗಲಿದೆ ಎಂದು ಹೇಳಿದರು.

ಆದರೆ ಸರಕಾರವು ಜಾತ್ಯತೀತ ಮತ್ತು ಸಮಾಜವಾದಿ ಎಂಬ ಪದಗಳನ್ನು ಸಂವಿಧಾನದಿಂದ ತೆಗೆದು ಹಾಕುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿತು.

Write A Comment