ರಾಷ್ಟ್ರೀಯ

ಹೃದಯಾಘಾತದಿಂದ ಸಾವನ್ನಪ್ಪಿದ ಪತಿ ನೋಡಿ ಪತ್ನಿ ಆತ್ಮಹತ್ಯೆಗೆ ಶರಣು

Pinterest LinkedIn Tumblr

14couple-suicideನೊಯ್ಡಾ: ಹೃದಯಾಘಾತದಿಂದ ಸಾವನ್ನಪ್ಪಿದ ಗಂಡನನ್ನು ನೋಡಿದ ಪತ್ನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ನೊಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಬುಧವಾರ ನಡೆದಿದೆ.

ಅನುರಾಗ್ ಅಗರ್ವಾಲ್ (39) ಮೋನಿಕಾ (36) ಸಾವನ್ನಪ್ಪಿದ ದಂಪತಿಗಳಾಗಿದ್ದಾರೆ. ಈ ದಂಪತಿಗೆ 6 ವರ್ಷದ ಮಗಳಿದ್ದಾಳೆ. ನಿನ್ನೆಯಷ್ಟೇ ಎದೆನೋವು ಎಂದು ಹೇಳಿದ ಪತಿ ಅನುರಾಗ್’ನನ್ನು ಮೋನಿಕಾ ಸೆಕ್ಟರ್ 62ರಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿದ್ದರು. ಅನುರಾಗ್ ಹೆಚ್ಚಿನ ಒತ್ತಡದಿಂದ ಬಳಲುತ್ತಿದ್ದು, ಹೃದಯಾಘಾತ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ. ನಂತರ ಚಿಕಿತ್ಸೆ ಸ್ಪಂದಿಸಿದ ಕಾರಣ ಅನುರಾಗ್ ಇಂದು ಬೆಳಿಗ್ಗೆ 11 ಗಂಟೆಗೆ ಸಾವನ್ನಪ್ಪಿದ್ದಾರೆಂದು ಮೋನಿಕಾಗೆ ಹೇಳಿದ್ದಾರೆ.

ತೀವ್ರವಾಗಿ ನೊಂದಿದ್ದ ಮೋನಿಕಾ ಪತಿಯ ಅಂತ್ಯ ಸಂಸ್ಕಾರಕ್ಕೆ ಮನೆಗೆ ಬಂದಿದ್ದಾಳೆ. ನಂತರ ಇದ್ದಕ್ಕಿದ್ದಂತೆ ರೂಮಿನ ಬಾಗಿಲನ್ನು ಹಾಕಿದ ಮೋನಿಕಾ, ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿದ್ದಾಳೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Write A Comment