ರಾಷ್ಟ್ರೀಯ

ಅಸಹಿಷ್ಣುತೆ : ಅಮೀರ್ ಖಾನ್ ಬೆನ್ನಿಗೆ ನಿಂತ ಆಜಂ ಖಾನ್

Pinterest LinkedIn Tumblr

11azamಲಕ್ನೋ: ಅಸಹಿಷ್ಣುತೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿರುವ ಬಾಲಿವುಡ್ ನಟ ಅಮೀರ್ ಖಾನ್ ಬೆಂಬಲಕ್ಕೆ ಧಾವಿಸಿರುವ ಸಮಾಜವಾದಿ ನಾಯಕ   ಆಜಂ ಖಾನ್, ದೇಶದಲ್ಲಿ ಸೃಷ್ಟಿಯಾಗಿರುವ ಸದ್ಯದ ವಾತಾವರಣಕ್ಕೆ ಸಂಬಂದಿಸಿದಂತೆ ಅಮೀರ್ ಅವರ ‘ಹಿಂದೂ’ ಪತ್ನಿಗಾಗುತ್ತಿರುವ ಅಭದ್ರತೆ ಭಾವನೆ ಸಾಮಾನ್ಯ ಜನರ ದುರವಸ್ಥೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು,” ಈ  ಅಭಿಪ್ರಾಯ Dಮೀರ್ ಅವರದಲ್ಲ. ಹಿಂದೂ ಧರ್ಮದವಳಾಗಿರುವ ಅವರ ಪತ್ನಿ ನೀಡಿದ ಹೇಳಿಕೆಯಿದು. ಅಮೀರ್ ಪತ್ನಿ ಓರ್ವ ಹಿಂದೂ ಆಗಿದ್ದು, ಅವರಿಗೆ ಈ ದೇಶದಲ್ಲಿ ಅಭದ್ರತೆಯ ಭಾವ ಕಾಡುತ್ತಿದೆ ಎಂದಾದರೆ ಯಾವುದೇ ಬೆಂಬಲ ಇಲ್ಲದಿರುವ ಮುಸ್ಲಿಮರ ಪರಿಸ್ಥಿತಿ ಹೇಗಿರಬೇಡ”, ಎಂದು ಪ್ರಶ್ನಿಸಿದ್ದಾರೆ.

“ಅಷ್ಟೇ ಅಲ್ಲದೇ ಅಮೀರ್ ಹೇಳಿರುವುದರಲ್ಲಿ ವಾಸ್ತವವಿದೆ,  ತಮ್ಮ ಮಕ್ಕಳ ಭದ್ರತೆಗಾಗಿ ಅಮೀರ್ ಚಿಂತೆ ಮಾಡಬೇಕಾಗಿ ಬಂದಿರುವುದು ವಿಪರ್ಯಾಸ”, ಎಂದು ಆಜಂ ಹೇಳಿದ್ದಾರೆ.

Write A Comment