ರಾಷ್ಟ್ರೀಯ

ಸಾಹಿತಿಗಳು ಹಣ ಪಡೆದು ಪ್ರಶಸ್ತಿ ಹಿಂತಿರುಗಿಸುತ್ತಿದ್ದಾರೆ: ಬಿಜೆಪಿ ಸಂಸದ

Pinterest LinkedIn Tumblr

10bjppಗುವಾಹಟಿ: ಅಸಹಿಷ್ಣುತೆ ವಿರೋಧಿಸಿ ದೇಶಾದ್ಯಂತ ಸಾಹಿತ್ಯ ಆಕಾಡೆಮಿ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವ ಸಾಹಿತಿಗಳು, ಚಿತ್ರನಿರ್ಮಾಪಕರು ಹಣ ಪಡೆದು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ರಾಮೇಶ್ವರ್ ತೇಲಿ ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.

ನಂತರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿ ಯಾರಿಗೂ ನೋವುಂಟು ಮಾಡುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಿಬುರ್‌ಗಢ್‌ ಲೋಕಸಭಾ ಕ್ಷೇತ್ರದ ಸಂಸದರಾದ ರಾಮೇಶ್ವರ್ ತೇಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಸಾಂ ರಾಜ್ಯದ ಖ್ಯಾತ ಸಾಹಿತಿ ಹೊಮೆನ್ ಬೊರ್ಗೊಹೈನ್ ಸೇರಿದಂತೆ ಪ್ರತಿಯೊಬ್ಬ ಸಾಹಿತಿಗಳು 10 ರಿಂದ 15 ಲಕ್ಷ ರೂ. ಹಣ ಪಡೆದು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವನ್ನು ಅಪಮಾನ ಮಾಡಲು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದವರು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರಶಸ್ತಿಗಳನ್ನು ಪಡೆದಿಲ್ಲ.10 ರಿಂದ 15 ಲಕ್ಷ ರೂಪಾಯಿಗಳನ್ನು ಪಡೆದು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಮೇಶ್ವರ್ ತೇಲಿ ಹೇಳಿಕೆಗೆ ವಿವಿಧ ಸಮುದಾಯಗಳಿಂದ ಉಗ್ರ ಸ್ವರೂಪದ ಪ್ರತಿಕ್ರಿಯೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಹಿಂಪಡೆದಿರುವುದಾಗಿ ತೇಲಿ ತಿಳಿಸಿದ್ದಾರೆ.

ನನ್ನ ಹೇಳಿಕೆಯ ಬಗ್ಗೆ ಆಸ್ಸಾಂ ಜನತೆಯಲ್ಲಿ ಕ್ಷಮೆ ಕೋರುತ್ತೇನೆ. ನನಗೆ ಯಾರಿಗೂ ನೋವು ಮಾಡುವ ಉದ್ದೇಶವಿರಲಿಲ್ಲ ಎಂದು ಬಿಜೆಪಿ ಸಂಸದ ರಾಮೇಶ್ವರ್ ತೇಲಿ ಹೇಳಿದ್ದಾರೆ.

Write A Comment