ಮನೋರಂಜನೆ

ಆಮಿರ್ ಖಾನ್ ಹೇಳಿಕೆ ವಿರುದ್ಧ ಕೇಸ್ ದಾಖಲು

Pinterest LinkedIn Tumblr

amirkhan

ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ತಮಗೂ ಅಭದ್ರತಾ ಭಾವನೆ ಇದೆ ಎಂದು ಹೇಳಿದ್ದ ಬಾಲಿವುಡ್ ನಟ ಆಮಿರ್ ಖಾನ್ ವಿರುದ್ದು ಮಂಗಳವಾರ ದೆಹಲಿಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

ಕಿರುಚಿತ್ರ ನಿರ್ಮಾಪಕ ಉಲ್ಲಾಸ್ ಪಿಆರ್ ಎಂಬುವವರು ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಬಾಲಿವುಡ್ ನಟನ ವಿರುದ್ಧ ಕೇಸ್ ದಾಖಲಿಸಿದ್ದಾರೆ.

‘ನಮಗೂ ಕೆಲವು ಮೂಲಭೂತ ಕರ್ತವ್ಯಗಳಿದ್ದು, ಅವು ದೇಶದಲ್ಲಿ ಸಾಮರಸ್ಯ ಕಾಯ್ದುಕೊಳ್ಳಬೇಕು ಎಂದು ಹೇಳುತ್ತವೆ. ಹೀಗಾಗಿ ಗಣ್ಯ ವ್ಯಕ್ತಿಗಳು ಅನಿಸಿಕೊಂಡವರು, ಯಾವುದೇ ಹೇಳಿಕೆ ನೀಡುವ ಮುನ್ನ ತಮ್ಮ ಸ್ಥಾನದ ಬಗ್ಗೆ ಯೋಚಿಸಬೇಕು’ ಎಂದು ಉಲ್ಲಾಸ್ ಹೇಳಿದ್ದಾರೆ.

ಸಮಾಜದಲ್ಲಿ ಯಾವ ಸಮೂದಾಯದ ಜನ ಭಯದಿಂದ ಬದುಕುತ್ತಿದ್ದಾರೆ ಎಂಬುದನ್ನು ಅಮಿರ್ ಖಾನ್ ಅವರು ಸ್ಪಷ್ಟವಾಗಿ ಹೇಳಬೇಕಿತ್ತು ಎಂದಿದ್ದಾರೆ.

ದೇಶದಲ್ಲಿ ಅಸಹಿಷ್ಣುತೆ ವಿರುದ್ಧದ ಸಾಂಸ್ಕೃತಿಕ ವಲಯದ ಜನಾಗ್ರಹಕ್ಕೆ ದನಿಗೂಡಿಸಿದ್ದ ಆಮೀರ್ ಖಾನ್, ಈ ವಾತಾವರಣದಿಂದ ಭೀತಗೊಂಡು ದೇಶ ತೊರೆದು ಹೋಗೋಣ ಎಂದು ಪತ್ನಿ ಸಲಹೆ ನೀಡಿರುವುದಾಗಿ ನಿನ್ನೆ ಹೇಳಿದ್ದರು.

ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಆಮಿರ್, ಅಸಹಿಷ್ಣುತೆಯನ್ನು ವಿರೋಧಿಸಿ ಪ್ರಶಸ್ತಿಗಳನ್ನು ವಾಪಸು ನೀಡುತ್ತಿರುವ ಸಾಹಿತಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ ಕಳೆದ ಆರೆಂಟು ತಿಂಗಳುಗಳಿಂದ ತಾನೂ ಕೂಡ ಅಭದ್ರತಾ ಭಾವನೆ ಅನುಭವಿಸುತ್ತಿದ್ದೇನೆ. ದಿನನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿರುವ ಸಂಗತಿಗಳು ನನ್ನನ್ನು ಆತಂಕ್ಕೀಡುಮಾಡುತ್ತಿವೆ. ನಾನದನ್ನು ನಿರಾಕರಿಸಲಾರೆ ಎಂದಿದ್ದರು.

Write A Comment