ರಾಷ್ಟ್ರೀಯ

ಗೋಹತ್ಯೆ ನಿಷೇಧ ರಾಜ್ಯ ಸರಕಾರಗಳ ಆದ್ಯ ಕರ್ತವ್ಯ: ಕೇಂದ್ರ ಸಚಿವೆ ಜ್ಯೋತಿ

Pinterest LinkedIn Tumblr

saಕೋಲ್ಕತಾ: ದೇಶದಲ್ಲಿ ಗೋವನ್ನು ಹೊರತಾಗಿ ತಿನ್ನಲು ಸಾಕಷ್ಟು ಆಹಾರವಿದೆ. ಗೋವಧಾ ಕೇಂದ್ರಗಳನ್ನು ನಿಷೇಧಿಸುವುದು ರಾಜ್ಯ ಸರಕಾರಗಳ ಕರ್ತವ್ಯ ಎಂದು ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ ಹೇಳಿದ್ದಾರೆ.

ಗೋಹತ್ಯೆ ಮತ್ತು ಗೋಮಾಂಸ ಸೇವನೆ ಬಗ್ಗೆ ಮಾತನಾಡಿದ ಸಚಿವೆ ಜ್ಯೋತಿ, ಇಂತಹ ಘಟನೆಗಳು ನಡೆಯಬಾರದು. ಒಂದು ವೇಳೆ ನೀವು ನಮ್ಮಿಂದ ಗೌರವ ಬಯಸುವುದಾದಲ್ಲಿ ಮೊದಲು ನಮಗೆ ಮೊದಲು ಗೌರವಿಸುವುದನ್ನು ಕಲಿಯಬೇಕು. ಪ್ರಜಾಪ್ರಭುತ್ವದಲ್ಲಿ ಗೋಹತ್ಯೆ ನಿಷೇಧಿಸುವುದು ರಾಜ್ಯ ಸರಕಾರಗಳ ಕರ್ತವ್ಯ. ಗೋವು ಹೊರತಾಗಿ ತಿನ್ನಲು ಬೇಕಾದಷ್ಟು ಆಹಾರಗಳಿವೆ ಎಂದು ತಿಳಿಸಿದ್ದಾರೆ.

ಬಿಹಾರ್ ಚುನಾವಣೆಯ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿಯೇ ರಾಜಕೀಯ ಸಂಚಿನಿಂದ ಅಸಹಿಷ್ಣುತೆ ವಿವಾದಕ್ಕೆ ಹೆಚ್ಚಿನ ಪ್ರಚಾರ ನೀಡಲಾಯಿತು ಎಂದು ಆರೋಪಿಸಿದರು.

ಬಿಹಾರ್ ಚುನಾವಣೆ ಫಲಿತಾಂಶ ಹೊರಬರುತ್ತಿದ್ದಂತೆ ಅಸಹಿಷ್ಣುತೆ ವಿರೋಧಿಗಳು ಕಾಣಿಸುತ್ತಿಲ್ಲ ಎಂದು ಆಹಾರ ಸಂಸ್ಕರಣ ಖಾತೆ  ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ  ಲೇವಡಿ ಮಾಡಿದರು.

Write A Comment