ರಾಷ್ಟ್ರೀಯ

ನನ್ನನ್ನು ರಾಜಕೀಯ ದಾಳವನ್ನಾಗಿ ಬಳಸಲಾಗುತ್ತಿದೆ: ರಾಬರ್ಟ್ ವಾದ್ರ

Pinterest LinkedIn Tumblr

6vadraನವದೆಹಲಿ: ಹರ್ಯಾಣ, ರಾಜಸ್ಥಾನ ಸರ್ಕಾರಗಳಿಂದ ಭೂ ಅಕ್ರಮ ತನಿಖೆ ಎದುರಿಸುತ್ತಿರುವ ರಾಬರ್ಟ್ ವಾದ್ರ ತಮ್ಮನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರ, ತಮ್ಮನ್ನು ಉದ್ಯಮ ನಡೆಸುವ ಬೇರೆ ಯಾವುದೇ ವ್ಯಕ್ತಿಯಂತೆಯೇ ಗುರುತಿಸಬೇಕು, ಪ್ರಿಯಾಂಕ ಗಾಂಧಿ ವಾದ್ರ ಅವರ ಕುಟುಂಬದ ರಾಜಕಾರಣದಿಂದ ಹೊರತಾಗಿ ನೋಡಬೇಕು ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ. ಬಿಜೆಪಿ ತಮ್ಮ ವಿರುದ್ಧದ ಆರೋಪಗಳನ್ನು ರಾಜಕೀಯ ದಾಳವಾಗಿ ಬಳಸುತ್ತಿದೆ ಎಂದು ವಾದ್ರ ಆರೋಪಿಸಿದ್ದಾರೆ.

ನಾನು ಪಾರದರ್ಶಕ ಉದ್ಯಮ ನಡೆಸುತ್ತಿದ್ದೇನೆ, ಆದರೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ನನ್ನ ವಿರುದ್ಧ ಆರೋಪ ಹೆಚ್ಚಾದಷ್ಟು ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾದ್ರ ಹೇಳಿದ್ದಾರೆ.

Write A Comment