ರಾಷ್ಟ್ರೀಯ

ನಾಲ್ಕು ತಿಂಗಳಲ್ಲಿ ದೇಶದಲ್ಲಿ ನಡೆದದ್ದು 300 ಕೋಮು ಗಲಭೆ!

Pinterest LinkedIn Tumblr

5dadri-incidentನವದೆಹಲಿ: ದೇಶದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 300 ಕೋಮುಗಲಭೆ ನಡೆದಿದೆ ಎಂದು ಕೇಂದ್ರ ಗೃಹ ಸಚಿವಾಲಯದಿಂದ ಸಿಕ್ಕ ಮಾಹಿತಿಯಿಂದ ಬಹಿರಂಗವಾಗಿದೆ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಇದ್ಯಾವುದೂ ಸಂಭವಿಸಿಲ್ಲ.

ಅದೇ ವೇಳೆ ಇಂಥಾ ಗಲಭೆಗಳು ಉಂಟಾಗಲು ಪ್ರೇರಣೆ ನೀಡುತ್ತಿರುವುದು ಸಾಮಾಜಿಕ ತಾಣಗಳೇ ಆಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಂಸತ್ ಸಮಿತಿಗೆ ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ ವರದಿಯಲ್ಲಿ ಈ ವರ್ಷ ಅಕ್ಟೋಬರ್ ತಿಂಗಳವರೆಗೆ 630  ಕೋಮುಗಲಭೆಗಳು ನಡೆದಿದೆ ಎಂದು ಉಲ್ಲೇಖಿಸಲಾಗಿದೆ. ಇದರಲ್ಲಿ  300 ಘಟನೆಗಳು ಕಳೆದ ನಾಲ್ಕು ತಿಂಗಳಲ್ಲಿ ನಡೆದುದ್ದಾಗಿದೆ.  ಈ ಸಂಘರ್ಷಗಳಲ್ಲಿ 68 ಜನರು ಸಾವಿಗೀಡಾಗಿದ್ದು,  1899 ಮಂದಿಗೆ ಗಾಯಗಳಾಗಿವೆ.

ದೇವಾಲಯಗಳಿಗೆ ಸಂಬಂಧಿಸಿದಂತೆ  ಫರಿದಾಬಾದ್‌ನ ಅಟ್ಟಾಲಿಯಲ್ಲಿ, ಮತ್ತು ದಾದ್ರಿಯಲ್ಲಿ ನಡೆದ ಗೋಮಾಂಸ ಸಂಘರ್ಷವನ್ನು ಮಾತ್ರವೇ ಅತೀ ದೊಡ್ಡ  ಕೋಮು ಗಲಭೆ ಎಂದು ಇಲ್ಲಿ ಉಲ್ಲೇಖಿಸಲಾಗಿದೆ.

ಯುಪಿಎ ಸರ್ಕಾರದ ಅಧಿಕಾರಾವಧಿಯಲ್ಲಿ 2013 ರಲ್ಲಿ  823 ಕೋಮು ಗಲಭೆಗಳು ದೇಶದಲ್ಲಿ ನಡೆದಿದೆ.  ಮೋದಿ ಅಧಿಕಾರಕ್ಕೇರಿದ ನಂತರ 2014 ಇದು 644 ಆಗಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

Write A Comment