ಅಂತರಾಷ್ಟ್ರೀಯ

ಇಸಿಸ್ ದಾಳಿ ಭೀತಿ: ಕೆನಡಾದಲ್ಲಿ ಟರ್ಕಿ ವಿಮಾನ ತುರ್ತು ಭೂಸ್ಪರ್ಶ

Pinterest LinkedIn Tumblr

7Turkish-plane-divertedಹೆಲಿಪಾಕ್ಸ್: ವಿಮಾನದಲ್ಲಿ ಇಸಿಸ್ ಉಗ್ರರು ಬಾಂಬ್ ದಾಳಿ ನಡೆಸುವ ಕುರಿತು ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ನ್ಯೂಯಾರ್ಕ್ ಹಾಗೂ ಇಸ್ತಾಂಬುಲ್ ನಡುವೆ ಸಂಚರಿಸುವ ಟರ್ಕಿಶ್ ವಿಮಾನ ಕೆನಡಾ ತುರ್ತು ಭೂಸ್ಪರ್ಶ ಮಾಡಿದ್ದು, ಕೆನಡಾ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ನ್ಯೂಯಾರ್ಕ್ ಹಾಗೂ ಟರ್ಕಿಯ ರಾಜಧಾನಿ ಇಸ್ತಾಂಬುಲ್ ನಡುವೆ ಸಂಚರಿಸುವ ಟರ್ಕಿ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಕೆನಡಾದ  ಹೆಲಿಪಾಕ್ಸ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಈ ವೇಳೆ ಐವರು ಪ್ರಯಾಣಿಕರು ವಿಮಾನದಲ್ಲಿಯೇ ಭಯದಿಂದ ಕೂಗಿಕೊಂಡ ಪರಿಣಾಮ ವಿಮಾನದಲ್ಲಿ ಕೆಲಹೊತ್ತ  ಅಂತಕಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ವಿಮಾನದ ಸಿಬ್ಬಂದಿಗಳು ಪ್ರಯಾಣಿಕರನ್ನು ಸಮಾಧಾನಿಸಿ ಬಳಿಕ ವಿಮಾನವನ್ನು ಕೆನಡಾದಲ್ಲಿ ಭೂಸ್ಪರ್ಶ ಮಾಡಿಸಿದರು.

ಈ ಬಗ್ಗೆ ಹೆಲಿಪಾಕ್ಸ್ ವಿಮಾನ ನಿಲ್ದಾಣ ಪ್ರಾಧಿಕಾರ ಟ್ವೀಟ್ ಮಾಡಿದ್ದು, ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಟರ್ಕಿಶ್ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಮತ್ತು ವಿಮಾನದಲ್ಲಿ 256  ಪ್ರಯಾಣಿಕರಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಪ್ರಸ್ತುತ ಕೆನಡಾ ಪೊಲೀಸರು ವಿಮಾನದಲ್ಲಿ ಶೋಧಕಾರ್ಯ ನಡೆಸಿದ್ದು, ಸ್ಫೋಟಕಗಳನ್ನು ಪತ್ತೆಹಚ್ಚುವ ನಾಯಿಗಳನ್ನು ಬಳಸಿ ವಿಮಾನದ ಶೋಧವನ್ನು ನಡೆಸಲಾಗಿದೆ. ಬಳಿಕ ವಿಮಾನದಲ್ಲಿ  ಯಾವುದೇ ರೀತಿಯ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಬಾಂಬ್ ಕರೆಯ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ, ಈ ಕರೆಯ ಹಿಂದಿರುವ ವ್ಯಕ್ತಿ  ಅಥವಾ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಟ್ವೀಟ್ ಮಾಡಿದ್ದಾರೆ.

ನ್ಯೂಯಾರ್ಕ್‌ನ ಜಾನ್.ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಈ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆಳಿಗ್ಗೆ ಸ್ಥಳೀಯ ಕಾಲಮಾನ 10.50ರಲ್ಲಿ ಬೆದರಿಕೆ  ಕರೆ ಬಂದಿತ್ತು. ಈ ಹಿನ್ನಲೆಯಲ್ಲಿ ಇಸ್ತಾನ್ ಬುಲ್ ನತ್ತ ಪ್ರಯಾಣ ಬೆಳೆಸಿದ್ದ ಟರ್ಕಿಶ್ ವಿಮಾನ ಕೆನಡಾದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

Write A Comment