ರಾಷ್ಟ್ರೀಯ

ಪುಸ್ತಕದ ಮುಖಪುಟ ನೋಡಿ ನಿರ್ಧರಿಸಬೇಡಿ: ಬಿಹಾರ ಡಿಸಿಎಂ ತೇಜಸ್ವಿ ಟ್ವೀಟ್

Pinterest LinkedIn Tumblr

tejaswi-newಯಾವುದೇ ಪುಸ್ತಕದ ಮುಖಪುಟ ನೋಡಿ ಪುಸ್ತಕದ ಬಗ್ಗೆ ತೀರ್ಮಾನ ಮಾಡಬೇಡಿ. ಅದರ ಒಳಗಿನ ಅಂತಃಸತ್ವದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ ಎಂದು ಬಿಹಾರ ನೂತನ ಡಿಸಿಎಂ ಹಾಗೂ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಟ್ವೀಟ್ ಮಾಡಿದ್ದಾರೆ.

ತಮಗೆ ಬಿಹಾರ ಉಪಮುಖ್ಯಮಂತ್ರಿ ಹುದ್ದೆ ನೀಡಿರುವುದಕ್ಕೆ ಹಲವರು ಟೀಕಿಸುತ್ತಿರುವುದಕ್ಕೆ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಯಾರೊಬ್ಬರು ಕವರ್ ಪೇಜ್ ನೋಡಿದ ತಕ್ಷಣ ಅದರ ಬಗ್ಗೆ ನಿರ್ಣಯ ಮಾಡಬಾರದು. ಔಷಧ ಕಹಿ ಇರುತ್ತದೆ ಆದರೆ ಅದರಿಂದಾಗುವ ಲಾಭ. ಅಧಿಕ. ನಿಜವಾದ ಲಾಭಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.

ಬಿಹಾರದ ಅಭಿವೃದ್ಧಿಗಾಗಿ ಶ್ರಮಿಸಿ, ಜನತೆ. ನಂಬಿಕೆ ಹಾಗೂ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದ್ದಾರೆ.

Write A Comment