ರಾಷ್ಟ್ರೀಯ

26 ವರ್ಷದ ಲಾಲು ಪುತ್ರನಿಗೆ ಡಿಸಿಎಂ ಹುದ್ದೆ ಜತೆ, 3 ಖಾತೆ: ಇನ್ನೊಬ್ಬ ಪುತ್ರ ತೇಜ್ ಪ್ರತಾಪ್ಗೂ 3 ಖಾತೆ

Pinterest LinkedIn Tumblr

tejaswiyadav20ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಯಾದವ್ ಹಾಗೂ ರಾಬ್ಡಿದೇವಿ ಅವರ 26 ವರ್ಷದ ಪುತ್ರ ತೇಜಸ್ವಿ ಯಾದವ್ ಅವರು ಈಗ ಬಿಹಾರದ ಉಪ ಮುಖ್ಯಮಂತ್ರಿ.

ಇಂದು ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರ ನಂತರ ಎರಡನೇ ವ್ಯಕ್ತಿಯಾಗಿ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕರಿಸಿದರು.

ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ತೇಜಸ್ವಿ ಯಾದವ್ ಅವರು ಓದಿದ್ದು ಕೇವಲ 9ನೇ ತರಗತಿ. ಈಗ ಬಿಹಾರದ ಉಪ ಮುಖ್ಯಮಂತ್ರಿ ಹುದ್ದೆಯ ಜತೆ ಮೂರು ಪ್ರಮುಖ ಖಾತೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇನ್ನೂ ತೇಜಸ್ವಿ ಅವರ ಹಿರಿಯ ಸಹೋದರ 28 ವರ್ಷದ ತೇಜ್ ಪ್ರತಾಪ್ ಯಾದವ್ ಅವರು ಸಹ ಇಂದು ನಿತಿಶ್ ಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರಿಗೂ ಮೂರು ಖಾತೆಗಳನ್ನು ನೀಡಲಾಗಿದೆ.

Write A Comment