ರಾಷ್ಟ್ರೀಯ

ನಕಲಿ ಪದವಿ ವಿವಾದ: ಕೋರ್ಟ್‌ನಿಂದ ಕೇಂದ್ರ ಸಚಿವೆ ಸೃತಿ ಇರಾನಿಗೆ ಸಂಕಷ್ಟ

Pinterest LinkedIn Tumblr

smruನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಚುನಾವಣೆ ಆಯೋಗಕ್ಕೆ ಶೈಕ್ಷಣಿಕ ಅರ್ಹತೆಯ ಬಗ್ಗೆ ನಕಲಿ ಅಫಿಡವಿಟ್ ಸಲ್ಲಿಸಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ, ಇರಾನಿಯವರ ಶೈಕ್ಷಣಿಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಚುನಾವಣೆ ಆಯೋಗ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ ಆದೇಶ ನೀಡಿದೆ.

ಚುನಾವಣೆ ಆಯೋಗ ಮತ್ತು ದೆಹಲಿ ವಿಶ್ವವಿದ್ಯಾಲಯ ಸಚಿವೆ ಸೃತಿ ಇರಾನಿಯವರ ಶೈಕ್ಷಣಿಕ ಅರ್ಹತೆ ದಾಖಲೆಗಳನ್ನುಪಡೆಯುವಲ್ಲಿ ವಿಫಲವಾಗಿದ್ದು ನ್ಯಾಯಾಲಯಕ್ಕೆ ಶೈಕ್ಷಣಿಕ ಅರ್ಹತೆ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಬೇಕು ಎನ್ನುವ ಅರ್ಜಿಯ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯದ ನ್ಯಾಯಮೂರ್ತಿ ಆಕಾಶ್ ಜೈನ್ ಇದೀಗ ಆದೇಶ ನೀಡಿದ್ದಾರೆ.

ಅರ್ಜಿದಾರರು ನೀಡಿದ ದೂರನ್ನು ಪರಿಶೀಲಿಸಿದ ನಂತರ, ಚುನಾವಣೆ ಆಯೋಗ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ ಇರಾನಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.

ಸ್ಮತಿ ಇರಾನಿಯವರ 10ನೇ ಮತ್ತು 12 ನೇ ಸಿಬಿಎಸ್‌ಇ ತರಗತಿಯ ದಾಖಲೆಗಳನ್ನು ನೀಡುವಂತೆ ಕೂಡಾ ನಿರ್ದೇಶಿಸಬೇಕು ಎನ್ನುವ ಅರ್ಜಿದಾರರ ಮನವಿಯನ್ನು ಕೋರ್ಟ್ ತಳ್ಳಿಹಾಕಿದೆ.

ಕೇಂದ್ರ ಸಚಿವೆ ಸ್ಮತಿ ಇರಾನಿ ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದರೂ ಚುನಾವಣೆ ಆಯೋಗಕ್ಕೆ ಶೈಕ್ಷಣಿಕ ಅರ್ಹತೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರುದಾರ ಅಹ್ಮೆರ್ ಖಾನ್ ತಿಳಿಸಿದ್ದಾರೆ.

Write A Comment