ರಾಷ್ಟ್ರೀಯ

30,000 ಕ್ಕೆ ಪತ್ನಿಯನ್ನೇ ಅಡವಿಟ್ಟ ಆಧುನಿಕ ಹರಿಶ್ಚಂದ್ರ

Pinterest LinkedIn Tumblr

patiಚಂಡೀಗಢ, ನ.17- ಕೇವಲ 30 ಸಾವಿರ ರೂ. ಸಾಲಕ್ಕೆ ತನ್ನ ಹೆಂಡತಿಯನ್ನೇ ಮತ್ತೊಬ್ಬ (ಸಾಲ ಕೊಟ್ಟ) ವ್ಯಕ್ತಿಗೆ ಅಡವಿಟ್ಟ ಆಧುನಿಕ ಹರಿಶ್ಚಂದ್ರನ ಕಥೆಯಿದು… ಆದರೆ ಅದಕ್ಕಿಂತ ಸ್ವಲ್ಪ ಭಿನ್ನ. ವ್ಯಾಪಾರಿಯೊಬ್ಬನ ಬಳಿ ಹೆಂಡತಿಯನ್ನು ಅಡವಿಟ್ಟು , ನಂತರ ಪತ್ನಿ ಹಾಗೂ ಮಿತ್ರನ ನೆರವಿನಿಂದ ಸಾಲ ನೀಡಿದ ವ್ಯಕ್ತಿಯನ್ನೇ ಹತ್ಯೆ ಮಾಡಿದ. 35 ವರ್ಷದ ಮೊಹಮ್ಮದ್ ಗೋಲಂ ನಿಗೂಢವಾಗಿ ಕೊಲೆಯಾಗಿದ್ದ. ಈ ಕೊಲೆಯ ಜಾಡು ಹಿಡಿದು ಹೊರಟಾಗ ಘಟನೆಯ ಹಿಂದಿನ ಕಥೆ ಬಿಚ್ಚಿಕೊಂಡದ್ದು ಹೀಗೆ. ಕೊಲೆಯಾದ ಮೊಹ್ಮದ್ ಗೋಲಂ ಹಾಗೂ ಕೊಲೆ ಮಾಡಿದ ಶಬ್ಬೀರ್ ಅಲಿ ಇಬ್ಬರೂ ಬಿಹಾರ ಮೂಲದವರು.

ಕಳೆದ ಕೆಲ ವರ್ಷಗಳ ಹಿಂದೆ ಇಬ್ಬರೂ ಹೊಟ್ಟೆಪಾಡಿಗಾಗಿ ಚಂಡೀಘಡಕ್ಕೆ ವಲಸೆ ಬಂದವರು. ಶಬ್ಬೀರ್ ಅಲಿ ಮತ್ತು ಪತ್ನಿ ಸಲ್ಮಾ ಒಂದು ಕ್ಯಾಂಟೀನ್ ನಡೆಸುತ್ತಿದ್ದರು. ಅತ್ತ ಗೋಲಂ ಒಂದು ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ಗೋಲಂ ಪ್ರತಿ ದಿನ ಶಬ್ಬೀರ್-ಸಲ್ಮಾಳ ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿದ್ದ. ಇಬ್ಬರೂ ಒಂದೇ ಕಡೆಯವರು. ಪರಿಚಯ ಸ್ನೇಹವಾಗಿತ್ತು. ಈ ಮಧ್ಯೆ ಕ್ಯಾಂಟೀನ್ ಮೂಲಕ ಶಬ್ಬೀರ್ ಗೆಳೆಯ ಗೋಲಂ ಬಳಿ 30 ಸಾವಿರ ಸಾಲ ಪಡೆದು ತನ್ನ ಹೆಂಡತಿ ಸಲ್ಮಾಳನ್ನು ಅವನ ಬಳಿ ಅಡವಿಟ್ಟ ಮೂರು ತಿಂಗಳು ಸಲ್ಮಾ ಸಾಲ ಕೊಟ್ಟಿದ್ದ ಗೆಳೆಯ ಮನೆಯಲ್ಲೇ ಇದ್ದಳು.ಮೂರು ತಿಂಗಳ ನಂತರ ಶಬ್ಬೀರ್ 30 ಸಾವಿರ ಹಣ ಕೊಂಡೊಯ್ದು ಹೆಂಡತಿ ಸಲ್ಮಾಳನ್ನು ವಾಪಸು ಕೊಡುವಂತೆ ಕೇಳಿದ. ಆದರೆ ಗೋಲಂ, ಹಣಕ್ಕೆ ಬಡ್ಡಿ 20 ಸಾವಿರ ರೂ. ಸೇರಿಸಿ ಕೊಡಬೇಕು. ಆಗ ನಿನ್ನ ಹೆಂಡತಿಯನ್ನು ಕಳುಹಿಸಿಕೊಡುತ್ತೇವೆ ಎಂದು ಹೇಳಿದ.

ಇದರಿಂದ ಕೋಪಗೊಂಡ ಶಬ್ಬೀರ್ ತನ್ನ ಹೆಂಡತಿ ಸಲ್ಮಾ, ಗೆಳೆಯರಾದ ಅಖ್ತರ್ ಹಾಗೂ ಗೌರವ್‌ರೊಂದಿಗೆ ಸೇರಿ ಗೋಲಂ ಹತ್ಯೆಯ ಸಂಚು ರೂಪಿಸಿದ. ಇದಾದ ನಂತರ, ಅಕ್ಟೋಬರ್ 31ರಂದು ಶಬ್ಬೀರ್ ಪತ್ನಿ ಸಲ್ಮಾ ಉಪಾಯ ಮಾಡಿ ಗೋಲಂನನ್ನು ಮನೆಯಿಂದ ಹೊರಗೆ ಕಳುಹಿಸಿದ್ದಳು. ಆ ವೇಳೆ ಶಬ್ಬೀರ್, ಅಖ್ತರ್ ಹಾಗೂ ಗೌರವ್ ಗೋಲಂನನ್ನು ಉಸಿರು ಕಟ್ಟಿಸಿ ನಂತರ ಹೊಡೆದು ಸಾಯಿಸಿದ್ದರು. ಈಗ ಸಲ್ಮಾ, ಶಬ್ಬೀರ್, ಅಖ್ತರ್ ಮತ್ತು ಗೌರವ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂದೀಪ್‌ಕುಮಾರ್ ಹೇಳಿದ್ದಾರೆ.

Write A Comment