ರಾಷ್ಟ್ರೀಯ

ಲಿಫ್ಟ್ ಬಾಗಿಲಿಗೆ ಸಿಲುಕಿದ ಬಾಲಕಿ ಸಾವು

Pinterest LinkedIn Tumblr

school

ಹೈದ್ರಾಬಾದ್: ಲಿಫ್ಟಿನಲ್ಲಿ ಸಿಕ್ಕಿಹಾಕಿಕೊಂಡು ಮೂರು ವರ್ಷದ ಬಾಲಕಿ ದುರ್ಮರಣಕ್ಕೀಡಾಗಿರುವಂತಹ ಘಟನೆ ಹೈದ್ರಾಬಾದ್ ನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ಹೈದ್ರಾಬಾದ್ ನ ದಿಲ್ ಸುಖ್ ನಗರದ ಬಳಿ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಲಿಫ್ಟ್ ಬಾಗಿಲಿಗೆ ಬಾಲಕಿಯ ತಲೆ ಸಿಲುಕಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸಯೀದ ಜೈನಬ್ ಫಾತಿಮಾ(3) ಮೃತಪಟ್ಟ ಬಾಲಕಿ. ಶಿಕ್ಷಕಿ ಎದುರೇ ಎಲಿವೇಟರ್ ನಲ್ಲಿ ಸಿಕ್ಕಿಹಾಕಿಕೊಂಡು ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಹೈದ್ರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶಾಲಾ ಶಿಕ್ಷಕಿ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದ್ದು ಎಂದು ಆರೋಪಿಸಲಾಗಿದೆ.

ಶಾಲೆಯ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮೊನ್ನೆಯಷ್ಟೇ ತೆರಿಗೆ ಪಾವತಿಸಿಲ್ಲ ಎಂದು ಶಾಲಾ ಆಡಳಿತ ಮಂಡಳಿಗೆ ನೋಟೀಸ್ ನೀಡಲಾಗಿತ್ತು. ಅಲ್ಲದೇ, ಈ ಶಾಲೆಯ ಕಟ್ಟಡ ಸರಿಯಾಗಿ ನಿರ್ಮಾಣಗೊಂಡಿಲ್ಲ ಎಂದು ಸರ್ಕಾರ ದಂಡ ವಿಧಿಸಿ, 15 ದಿನಗಳ ಕಾಲ ಶಾಲೆಯನ್ನು ಮುಚ್ಚಲಾಗಿತ್ತು.

Write A Comment