ರಾಷ್ಟ್ರೀಯ

ಎನ್‌ಎಸ್‌ಸಿಎನ್(ಕೆ) ಭಯೋತ್ಪಾದಕ ಸಂಘಟನೆ: ಕೇಂದ್ರದ ಘೋಷಣೆ

Pinterest LinkedIn Tumblr

NSCN-IMಹೊಸದಿಲ್ಲಿ, ನ.16: ಮಣಿಪುರದಲ್ಲಿ 18 ಮಂದಿ ಸೇನಾ ಯೋಧರ ಹತ್ಯೆಗೆ ಕಾರಣವಾಗಿದೆಯನ್ನ ಲಾಗಿರುವ ‘ನ್ಯಾಶನಲ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್-ಖಪ್ಲಾಂಗ್ (ಎನ್‌ಎಸ್‌ಸಿಎನ್-ಕೆ) ಸಂಘಟನೆ ಯನ್ನು ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನ್ವಯ ಭಯೋತ್ಪಾದಕ ಸಂಘಟನೆ ಯೆಂದು ಘೋಷಿಸಲಾಗಿದೆ.

ಇತ್ತೀಚೆಗೆ ಹೊರಡಿಸಲಾದ ಗೆಜೆಟ್ ಅಧಿಸೂಚನೆ ಯೊಂದರಲ್ಲಿ, ಎನ್‌ಎಸ್‌ಸಿಎನ್-ಕೆ, ಅದರ ಎಲ್ಲ ಅಂಗಸಂಸ್ಥೆಗಳು ಹಾಗೂ ಗುಂಪುಗಳನ್ನು ಕಾನೂನು ಬಾಹಿರ ಚಟುವಟಿಕೆ(ತಡೆ) ಕಾಯ್ದೆ-1967ರನ್ವಯ ಭಯೋತ್ಪಾದಕ ಸಂಘಟನೆಯೆಂದು ಸರಕಾರ ಘೋಷಿಸಿದೆಯೆಂದು ಗೃಹ ಸಚಿವಾಲ ಯದ ವಕ್ತಾರರೊಬ್ಬರು ತಿಳಿಸಿದರು.

2001ರಲ್ಲಿ ಶಾಂತಿ ಒಪ್ಪಂದ ವೊಂದಕ್ಕೆ ಸಹಿ ಮಾಡಿದ್ದ ಈ ಗುಂಪು 2015ರ ಮಾರ್ಚ್‌ನಲ್ಲಿ ಕದನ ವಿರಾಮ ಒಪ್ಪಂದವನ್ನು ಏಕಪಕ್ಷೀಯವಾಗಿ ಹಿಂದೆಗೆದುಕೊಂ ಡಿತ್ತು. ತನ್ನ ನಿಯಂತ್ರಣದಲ್ಲಿರುವ ಭಾರತ- ಮ್ಯಾನ್ಮಾರ್ ಗಡಿ ಪ್ರದೇಶವು ತ್ವರಿತವಾಗಿ ಪರೇಶ್ ಬರುವಾ ನೇತೃತ್ವದ ಉಲ್ಫಾ ಸಂಘಟನೆ, ಐ.ಕೆ. ಸೊಂಗ್ಬಿಜಿತ್ ನಾಯಕತ್ವದ ಎನ್‌ಡಿಎಫ್‌ಬಿ ಹಾಗೂ ಮಣಿಪುರ ಲಿಬರೇಶನ್ ಆರ್ಮಿ ಗ್ರೂಪ್‌ನಂತಹ ಉಗ್ರ ಸಂಘಟನೆಗಳಿಗೆ ‘ಸುರಕ್ಷಿತ ವಲಯವಾಗಿ’ ಪರಿವರ್ತನೆಯಾಗುತ್ತಿದೆಯೆಂಬುದು ಅದರ ಆರೋಪ ವಾಗಿತ್ತು.

ಅಮಾಯಕ ನಾಗರಿಕರು ಹಾಗೂ ಭದ್ರತಾ ಪಡೆಗಳನ್ನು ಕೊಲ್ಲುವ ಮೂಲಕ ಎನ್‌ಎಸ್‌ಸಿಎನ್(ಕೆ) ಪುನಃ ಭಯೋತ್ಪಾದನೆಯನ್ನು ಆರಂಭಿಸಿದೆ ಹಾಗೂ ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಸೇನಾ ಪಡೆಯೊಂದರ ಮೇಲೆ ಜೂನ್ 4ರಂದು ನಡೆಸಿದ ದಾಳಿ ಸಹಿತ ಇತರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆಯೆಂದು ವಕ್ತಾರರು ಹೇಳಿದರು.

ಈ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸುತ್ತಿದ್ದು, ಎನ್‌ಎಸ್‌ಸಿಎನ್(ಕೆ)ಯ ನಾಯಕ ಎಸ್.ಎಸ್.ಖಪ್ಲಾಂಗ್ ಸಹಿತ ಇಬ್ಬರು ಉಗ್ರ ನಾಯಕರ ಬಗ್ಗೆ ಮಾಹಿತಿ ನೀಡಿದವರಿಗೆ ರೂ. 17 ಲಕ್ಷ ಬಹುಮಾನವನ್ನು ಘೋಷಿಸಿದೆ.

ತನಿಖೆ ಸಂಸ್ಥೆಯು ಖಪ್ಲಾಂಗ್‌ನ ತಲೆಗೆ ರೂ. 7 ಲಕ್ಷ ಘೋಷಿಸಿದ್ದರೆ, ಜೂ.4ರ ದಾಳಿಯ ನಾಯಕತ್ವ ವಹಿಸಿದ್ದನೆನ್ನಲಾದ ಸಂಘಟನೆಯ ಸಶಸ್ತ್ರ ವಿಭಾಗದ ಸ್ವಯಂಘೋಷಿತ ನಾಯಕ ನಿಕಿ ಸುಮಿ ಎಂಬಾತನ ತಲೆಗೆ ರೂ. 10 ಲಕ್ಷ ಬಹುಮಾನ ನೀಡುವುದಾಗಿ ಪ್ರಕಟಿಸಿದೆ.

ಖಪ್ಲಾಂಗ್, ಮ್ಯಾನ್ಮಾರ್‌ನ ನಿವಾಸಿಯಾಗಿದ್ದರೆ, ಸುಮಿ ನಾಗಾಲ್ಯಾಂಡ್ ಮೂಲದವನು. 75ರ ಹರೆಯದ ಖಪ್ಲಾಂಗ್ ಆಸ್ಪತ್ರೆಯೊಂದರಲ್ಲಿದ್ದನು. ಬಳಿಕ ಆತನನ್ನು ಭಾರತ-ಮ್ಯಾನ್ಮಾರ್ ಚೀನಾ ಗಡಿಗಳ ಸಂಧಿಯಲ್ಲಿರುವ ಸ್ಥಳವೊಂದಕ್ಕೆ ವರ್ಗಾಯಿಸಲಾಗಿದೆಯೆಂಬ ವರದಿಗಳಿವೆ. ಮಣಿಪುರ ದಾಳಿಯ ವೇಳೆ ಸೇನಾ ಟ್ರಕ್ ಒಂದರ ಮೇಲೆ ‘ಲಾಥೋಡ್ ಗನ್’ ಹಾಗೂ ಗ್ರೆನೇಡ್ ದಾಳಿ ನಡೆಸಿದ್ದ ಎನ್‌ಎಸ್‌ಸಿಎನ್(ಕೆ) ಉಗ್ರರು 18 ಸೈನಿಕರನ್ನು ಕೊಂದು ಇತರ 15 ಮಂದಿಯನ್ನು ಗಾಯಗೊಳಿಸಿದ್ದರು.

ಈ ದಾಳಿಯನ್ನು ನಡೆಸುವುದಕ್ಕಾಗಿ ಉಗ್ರರು 3 ಗುಂಪುಗಳನ್ನು ರಚಿಸಿದ್ದರು ಹಾಗೂ ಗರಿಷ್ಠ ಹಾನಿಯನ್ನು ಮಾಡಲು ರಸ್ತೆಯುದ್ದಕ್ಕೂ ಸ್ಫೋಟಕ ತುಂಬಿದ್ದ ಕ್ಯಾನ್‌ಗಳನ್ನಿರಿಸಿದ್ದರೆಂದು ಮೂಲಗಳು ತಿಳಿಸಿವೆ.

ಈ ವರ್ಷದ ಮಾರ್ಚ್‌ನಲ್ಲಿ ಭಾರತದೊಂದಿಗಿನ ಕದನ ವಿರಾಮವನ್ನು ಹಿಂಪಡೆದಿದ್ದ ಎನ್‌ಎಸ್‌ಸಿಎನ್(ಕೆ), ‘ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಸೌತ್ ಏಶ್ಯ’ ಬ್ಯಾನರ್‌ನ ಅಡಿ ಈಶಾನ್ಯದ ಇತರ ಗುಂಪುಗಳೊಂದಿಗೆ ಸೇರಿ ಅನೇಕ ದಾಳಿಗಳನ್ನು ನಡೆಸಿದೆ.

Write A Comment