ಅಂತರಾಷ್ಟ್ರೀಯ

ಪ್ಯಾರಿಸ್ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಗುರುತು ಪತ್ತೆ

Pinterest LinkedIn Tumblr

master-mindಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಐಸಿಸ್ ಉಗ್ರರು ನಡೆಸಿದ ದಾಳಿಯ ಮಾಸ್ಟರ್ ಮೈಂಡ್  ಬೆಲ್ಜಿಯಂನ ಅಬ್ಡೆಲ್ ಹಮೀದ್ ಅಬೌಡ್ ಎಂದು ಫ್ರೆಂಚ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಯುರೋಪ್ ನಾದ್ಯಂತ ಮತ್ತಷ್ಟು ದಾಳಿ ನಡೆಸುವ ಎಚ್ಚರಿಕೆ ಹಿನ್ನೆಲೆಯಲ್ಲಿ ಫ್ರಾನ್ಸ್ ಪೊಲೀಸರು ಸೋಮವಾರ ಇಸ್ಲಾಮಿಕ್ ಉಗ್ರರ ನೆಲೆಗಳ ಮೇಲೆ 150ಕ್ಕೂ ಅಧಿಕ ದಾಳಿಗಳನ್ನು ನಡೆಸುವ ಮೂಲಕ ಉಗ್ರರು ಶೇಖರಿಸಿಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ನಡುವೆ  ಪ್ಯಾರಿಸ್ ದಾಳಿಯ ಶಂಕಿತ ಮಾಸ್ಟರ್ ಮೈಂಡ್ ಬೆಲ್ಜಿಯಂ ನಿವಾಸಿ ಎಂದು ಪತ್ತೆ ಹಚ್ಚಲಾಗಿದೆ ಎಂದು ಫ್ರಾನ್ಸ್ ಆಂತರಿಕ ಸಚಿವ ಬರ್ನಾಡ್ ಕ್ಯಾಜೆನ್ಯುವೆ ತಿಳಿಸಿದ್ದಾರೆ.

ಫ್ರಾನ್ಸ್ ನ ಲೈಯೋನ್ ನಗರದಲ್ಲಿ 13 ದಾಳಿ ನಡೆಸಲಾಗಿದ್ದು.  ಈಗಾಗಲೇ ಸುಮಾರು 120 ಜನ ಶಂಕಿತರನ್ನು ಬಂಧಿಸಲಾಗಿದೆ.  ಎಕೆ 47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಫ್ರಾನ್ಸ್ ನಲ್ಲಿನ ಆತ್ಮಹತ್ಯಾ ಬಾಂಬರ್ ಗಳಿಗೆ ಬೆಲ್ಜಿಯಂ ಐಸಿಸ್ ಉಗ್ರರ ಜೊತೆ ಸಂಪರ್ಕ ಇದ್ದು, ದಾಳಿಯ ಮಾಸ್ಟರ್ ಮೈಂಡ್ ಅಬ್ಡೆಲ್ ಹಮೀದ್ ಅಬೌಡ್ ಎಂದು ಶಂಕಿಸಲಾಗಿದೆ.

Write A Comment