ರಾಷ್ಟ್ರೀಯ

ಮಳೆ ಅವಾಂತರ: ಸ್ವಕ್ಷೇತ್ರ ಆರ್‌.ಕೆ.ನಗರ್‌ಗೆ ಭೇಟಿ ನೀಡಿದ ಜಯಲಲಿತಾ

Pinterest LinkedIn Tumblr

jayaಚೆನ್ನೈ: ಕುಂಭದ್ರೋಣ ಮಳೆಯಿಂದ ಕೆರೆಯಂತಾದ ಚೆನ್ನೈನ ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಜೆ.ಜಯಲಲಿತಾ ಭೇಟಿ ನೀಡಿದ್ದಾರೆ.

ಆರ್.ಕೆ.ನಗರ್‌ದ ರಸ್ತೆಗಳೆಲ್ಲಾ ಮಳೆಯಿಂದ ಭರ್ತಿಯಾಗಿದ್ದು, ರಸ್ತೆಗಳಲ್ಲಿ ತುಂಬಿರುವ ನೀರನ್ನು ತೆಗೆಯುವಂತೆ ಕಾರ್ಪೋರೇಶನ್ ಅಧಿಕಾರಿಗಳಿಗೆ ಸೂಚಿಸಿದ್ದು, ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಆದೇಶ ನೀಡಿದ್ದಾರೆ.

ಕಳೆದೊಂದು ವಾರದಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚೆನ್ನೈನ ಜನಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆಗಳು ಜಲಾವೃತ್ತವಾಗಿದ್ದು, ಜನತೆ ಪರದಾಡುವಂತಾಗಿದೆ.

ನಗರದ ಸೈದಾಪೇಟ್ ಪ್ರದೇಶದಲ್ಲಿ ಬಸ್ ನೀರಿನಲ್ಲಿ ಮುಳುಗಿಹೋಗಿದ್ದು ನೋಡಿದಲ್ಲಿ ಮಳೆ ಎಂತಹ ಭೀಕರ ವಾತಾವರಣ ಸೃಷ್ಟಿಸಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಹಲವಾರು ಗಿಡಮರಗಳು ಧರೆಗಳುದಿದ್ದು, ನಿರಂತರ ಮಳೆಗೆ ತಮಿಳುನಾಡಿನಲ್ಲಿ ಸುಮಾರು 65 ಜನ ಸಾವನ್ನಪ್ಪಿದ್ದಾರೆ.

Write A Comment