ರಾಷ್ಟ್ರೀಯ

ಬ್ರಿಟನ್ ಸಂಸತ್ ನಲ್ಲಿ ಮೋದಿ ಭಾಷಣ: ಉಮರ್ ಅಬ್ದುಲ್ಲಾ ಪ್ರಶಂಸೆ

Pinterest LinkedIn Tumblr

omar-abdullaಶ್ರೀನಗರ: ಬ್ರಿಟಿಷ್ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅದ್ಭುತವಾಗಿ ಭಾಷಣ ಮಾಡಿದರು ಎಂದು  ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಸದಾ ನರೇಂದ್ರ ಮೋದಿ ವಿರುದ್ಧ  ಕಿಡಿ ಕಾರುವ ಬದಲು. ಸುಖಾ ಸುಮ್ಮನೆ ಟೀಕಿಸುವ ಬದಲು, ಪ್ರಧಾನಿ ಮಾಡಿದ ಭಾಷಣಕ್ಕೆ ಏಕೆ ಹೆಮ್ಮೆ ಪಡಬಾರದು?,’ ಎಂದು ಉಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

‘ಪ್ರಧಾನಿಗೆ ಮೋದಿಗೆ ಅತ್ಯಂತ ಕಠಿಣ ಪ್ರಶ್ನೆಗಳನ್ನು ಕೇಳಿದ್ದು, ಕೆಲವೊಂದನ್ನು ಕೇಳಬಾರದೆಂಬ ಯಾವುದೇ ನಿರ್ಬಂಧವಿರಲಿಲ್ಲ, ‘ಗಾರ್ಡಿಯನ್’ ಪ್ರಶ್ನೆ ಕೇಳದೇ ಪ್ರಧಾನಿಗೆ ಅಗೌರವ ತೋರಿದೆ,’ ಎಂದೂ ಉಮರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕನಿಗೆ ಸಾಮಾನ್ಯವಾಗಿ ಸಲ್ಲಿಸುವ ಗೌರವ ಪಡೆಯಲು ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಬಗೆಯಿಂದಾಗಿಯೇ ಮೋದಿ ಅರ್ಹರಲ್ಲ ಎಂಬುದು ಲಂಡನ್ ಬೀದಿಗಳಲ್ಲಿ ನಡೆದ ಪ್ರತಿಭಟನೆ ಹೇಳುತ್ತದೆ,’ ಎಂದು ಗಾರ್ಡಿಯನ್ ವರದಿ ಮಾಡಿತ್ತು.

Write A Comment