ರಾಷ್ಟ್ರೀಯ

ಉಲ್ಫಾ ಮುಖ್ಯಸ್ಥ ಅನೂಪ್ ಚೇತಿಯಾ ಇಂದು ದೆಹಲಿಗೆ

Pinterest LinkedIn Tumblr

ulfa

ನವದೆಹಲಿ: ಬಾಂಗ್ಲಾದಲ್ಲಿ ಬಂಧಿಯಾಗಿರುವ ಉಲ್ಫಾ ಉಗ್ರ ಸಂಘಟನೆ ಮುಖ್ಯಸ್ಥ ಅನೂಪ್ ಚೇತಿಯಾನನ್ನು  ಇಂದು ದೆಹಲಿಗೆ ಕರೆತರಲಾಗುತ್ತಿದೆ.

ಭಾರತ ಬಾಂಗ್ಲಾ ಗಡಿಯಲ್ಲಿ ಬಾಂಗ್ಲಾ ಪೊಲೀಸರಿಂದ 1997ರಿಂದ ಬಂಧಿಸಲ್ಪಟ್ಟಿದ್ದ ಚೇತಿಯಾ ಕಳೆದ 17 ವರ್ಷಗಳಿಂದ ಬಾಂಗ್ಲಾ ಜೈಲಿನಲ್ಲಿದ್ದ. ಆತನನ್ನು ವಶಕ್ಕೆ ಪಡೆಯಲು ಭಾರತ ದಶಕಗಳಿಗೂ ಹೆಚ್ಚು ಕಾಲದಿಂದ ಪ್ರಯತ್ನಿಸುತ್ತಿತ್ತು. ಆಸ್ಸಾಂ ಉಲ್ಫಾ ಬಂಡುಕೋರರ ಸಂಘಟನೆಯ ಮುಖ್ಯಸ್ಥನಾದ ಈತನನ್ನು  ಭಾರತಕ್ಕೆ ಹಸ್ತಾಂತರಿಸಲು ಕೆಲವು ಗೊಂದಲಗಳಿದ್ದವು. ಹೀಗಾಗಿ ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಬಾಂಗ್ಲಾ ಒಪ್ಪಿರಲಿಲ್ಲ. ಈಗ ಪ್ರಧಾನಿ ಮೋದಿಯವರ ಮಧ್ಯಪ್ರವೇಶದಿಂದ  ಸ್ಪಷ್ಟ ನಿಲುವು ಪಡೆದ ಬಾಂಗ್ಲಾ ಚೇತಿಯಾನನ್ನು ಕೊನೆಗೂ ಸಿಬಿಐಗೆ ಹಸ್ತಾಂತರಿಸಿದೆ. ತಮ್ಮ ವಶಕ್ಕೆ ಪಡೆದಿರುವ ಚೇತಿಯಾನನ್ನು ಸಿಬಿಐ ತಂಡ ಇಂದು ದೆಹಲಿಗೆ ಕರೆ ತರುತ್ತಿದೆ.

ಕಳೆದ ಒಂದು ವರ್ಷಗಳಿಂದ ಪ್ರಧಾನಿ ಮೋದಿ ಆತನನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದರು.

ಆಸ್ಸಾನಲ್ಲಿ ಚೇತಿಯಾ ವಿರುದ್ಧ ಕೊಲೆ, ದೇಶದ್ರೋಹ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ.

ಚೋಟಾ ರಾಜನ್‌ನ್ನು ವಶಕ್ಕೆ ಪಡೆಯಲು ಸಫಲವಾಗಿದ್ದ ಎನ್‌ಡಿಎ ಸರ್ಕಾರ ಈಗ ಮತ್ತೊಬ್ಬ ಮೋಸ್ಟ್ ವಾಂಟೆಂಡ್ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕ ಮತ್ತೊಂದು ಯಶವನ್ನು ಪಡೆದುಕೊಂಡಂತಾಗಿದೆ.

Write A Comment