ಕನ್ನಡ ವಾರ್ತೆಗಳು

ನಾಗತಿಹಳ್ಳಿಗೆ ಹೆಜ್ಜೇನು ಕಡಿತ: ‘ಇಷ್ಟಕಾಮ್ಯ’ ಚಿತ್ರೀಕರಣದ ವೇಳೆ ನಿಟ್ಟೂರು ಸಮೀಪ ಘಟನೆ

Pinterest LinkedIn Tumblr

Nagatihalli_Admitt_kundapur chinmayi (3)

ಕುಂದಾಪುರ: ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಚಿತ್ರೀಕರಣದ ವೇಳೆ ಹೆಜ್ಜೇನು ಕಡಿದ ಪರಿಣಾಮ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ನಿಟ್ಟೂರು ಸಮೀಪದ ಬರ್ವೆ ಎಂಬಲ್ಲಿ ನಾಗತಿಹಳ್ಳಿ ನಿರ್ದೇಶನದ ‘ಇಷ್ಟಕಾವ್ಯ’ ಎಂಬ ಚಿತ್ರದ ಚಿತ್ರಕರಣಾಕ್ಕಾಗಿ ಸೆಟ್ ಹಾಕುತ್ತಿದ್ದ ವೇಳೆ ಈ ದುರ್ಘಟಮೆ ಸಂಭವಿಸಿದೆ. ಈ ಚಿತ್ರದ ದ್ರಶ್ಯವೊಂದರ ಚಿತ್ರೀಕರಣ ಬರ್ವೆ ಎಂಬಲ್ಲಿನ ತೂಗು ಸೇತುವೆ ಸಮೀಪ ನಡೆಯುತ್ತಿತ್ತು.

Jpeg

Jpeg

ಅಗ್ನಿಸಾಕ್ಷಿ ಖ್ಯಾತಿ ನಟ ವಿಜಯಸೂರ್ಯ ಹಾಗೂ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಅಭಿನಯದ ‘ಮೇಷ್ಟ್ರು’ ಎಂದೇ ಪರಿಚಿತರಾದ ನಾಗತಿಹಳ್ಳಿ ನಿರ್ದೇಶನದ ಇಷ್ಟಕಾಮ್ಯ ಚಿತ್ರದ ಚಿತ್ರೀಕರಣಕ್ಕೆಂದು ಮಲೆನಾಡಿನಲ್ಲಿ ಸುಮಾರು ೪೫ ದಿನಕ್ಕೂ ಅಧಿಕ ದಿನಗಳ ಕಾಲ ಶೂಟಿಂಗ್ ಮಾಡುತ್ತಿದ್ದ ತಂಡ ಬುಧವಾರ ಬೆಳಿಗ್ಗೆ ನಗರದ ನಿಟ್ಟೂರು ಸಮೀಪದ ಬರ್ವೆ ಎಂಬಲ್ಲಿನ ತೂಗು ಸೇತುವೆ ಇರುವ ಜಾಗಕ್ಕೆ ದ್ರಶ್ಯವೊಂದರ ಚಿತ್ರೀಕರಣಕ್ಕೆ ಆಗಮಿಸಿದ್ದರು. ಚಿತ್ರೀಕರಣಕ್ಕೆ ಕ್ಯಾಮೆರಾ ಅಳವಡಿಸಿ ಇನ್ನೇನು ಶೂಟಿಂಗ್ ಆರಂಭಿಸಬೇಕು ಎನ್ನುವಷ್ಟರಲ್ಲಿ ಅದೆಲ್ಲೋ ಇದ್ದ ಹೆಜ್ಜೇನುಗಳ ನಾಗತಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಮಾಡಿದೆ. ತಕ್ಷಣ ಮುನ್ಸೂಚನೆ ಅರಿತ ನಾಗತಿಹಳ್ಳಿ ತನ್ನ ಚಿತ್ರೀಕರಣ ತಂಡಕ್ಕೆ ಜೇನುದಾಳಿ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಹತ್ತಾರು ಜನರಿಗೆ ಜೇನು ಕಡಿದಿದೆ. ಇದೇ ವೇಳೆ ತಾಂತ್ರಿಕ ವಿಭಾಗದ ಕ್ರಷ್ಣ ಎನ್ನುವವರಿಗೆ ಜೇನುಕಡಿತದಿಂದ ಗಾಯಗಳಾಗಿದೆ.

ಕೂಡಲೇ ಚಿತ್ರೀಕರಣ ತಂಡ ಗಾಯಗೊಂಡ ನಾಗತಿಹಳ್ಳಿ ಹಾಗೂ ಕ್ರಷ್ಣ ಅವರನ್ನು ಕೊಲ್ಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಕುಂದಾಪುರದಲ್ಲಿ ನಾಗತಿ್ಹಳ್ಳಿ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಗ್ಗೆ ಯಾವ ಆತಂಕವೂ ಬೇಡ ಎಂದು ಚಿತ್ರೀಕರಣ ತಂಡದ ಮೂಲಗಳು ತಿಳಿಸಿದ್ದು ಗುರುವಾರ ಆಸ್ಪತ್ರೆಯಿಂದ ದಿಶ್ಚಾರ್ಜ್ ಆಗುವ ಬಗ್ಗೆಯೂ ತಿಳಿಸಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Write A Comment