ರಾಷ್ಟ್ರೀಯ

ಬಿಹಾರದಲ್ಲಿ ಹೀನಾಯ ಸೋಲಿನ ನಂತರ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ; ಅಡ್ವಾಣಿ, ಜೋಷಿ, ಸಿನ್ಹಾ ಏನಿಂದು ಪತ್ರ ಬರೆದಿದ್ದಾರೆ..?

Pinterest LinkedIn Tumblr

advani

ನವದೆಹಲಿ, ನ.11: ಬಿಹಾರ ಚುನಾವಣೆ ಹೀನಾಯ ಸೋಲಿನ ನಂತರ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು , ಈ ಸೋಲಿನಿಂದ ಪಕ್ಷಕ್ಕೆ ಭಾರೀ ಅವಮಾನವಾಗಿದೆ ಎಂದು ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ನೇತೃತ್ವದ ಹಿರಿಯರ ಪಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಕೆಂಡಕಾರಿದೆ.

ಇಂತಹ ದಯನೀಯ ಸೋಲಿಗೆ ಕಾರಣಗಳೇನು ಎಂಬ ಬಗ್ಗೆ ವಿವರ ಮಾಹಿತಿ ಕೊಡಿ ಎಂದು ಎಲ್.ಕೆ.ಅಡ್ವಾಣಿ ಮುರಳಿ ಮನೋಹರ ಜೋಷಿ, ಯಶವಂತ ಸಿನ್ಹಾ ಮತ್ತು ಶಾಂತಕುಮಾರ್ ಸೇರಿದಂತೆ ಹಿರಿಯ ನಾಯಕರು ಪ್ರಧಾನಿ, ಅಧ್ಯಕ್ಷರಿಗೆ ತೀಕ್ಷ್ಣವಾಗಿ ಪತ್ರ ಬರೆದಿದ್ದಾರೆ.

ಸೋಮವಾರ ಪ್ರಧಾನಿ ಮೋದಿ, ಅಮಿತ್ ಷಾ ಮತ್ತಿತರ ಮುಂಚೂಣಿ ನಾಯಕರು ಸಭೆ ನಡೆಸಿ ಸೋಲಿನ ಪರಾಮರ್ಶೆ ನಡೆಸಿ, ಈ ಸೋಲಿಗೆ ಯಾರೂ ಕಾರಣರಲ್ಲ ಮತ್ತು ನಿತೀಶ್ ಕುಮಾರ್ , ಲಾಲೂ ಪ್ರಸಾದ್ ಯಾದವ್ ಜೋಡಿಯ ಜಾತಿ ಸಮೀಕರಣ ಅಲ್ಲಿ ಕೆಲಸ ಮಾಡಿದೆ ಎಂದು ತೀರ್ಮಾನಿಸಿತ್ತು. ನಾಯಕರ ಸಭೆಯ ತೀರ್ಮಾನ ಹೊರ ಬಿದ್ದ ಬೆನ್ನಲ್ಲೇ ಕೆರಳಿ ಕೆಂಡಾಮಂಡಲವಾಗಿರುವ ಅಡ್ವಾಣಿ ತಂಡ, ಭಾರತೀಯ ಜನತಾ ಪಕ್ಷಕ್ಕೆ ಬಿಹಾರ ಸೋಲಿನಿಂದ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಮಾನ ಹೋಗಿದೆ. ಇದಕ್ಕೆ ಕಾರಣಗಳು ಏನು ಮತ್ತು ಯಾರು ಎಂಬುದನ್ನು ಪಟ್ಟಿ ಮಾಡಿ ಕೊಡಿ ಎಂದು ಹಿರಿಯರ ತಂಡ ಮುಗಿ ಬಿದ್ದಿದೆ.

ಅತ್ಯಂತ ಕಠಿಣವಾದ ಶಬ್ದಗಳನ್ನು ಬಳಸಿ ಪತ್ರ ಬರೆಯಲಾಗಿದೆಯಂತೆ.ಯಾವುದೇ ರಾಜಕೀಯ ಪಕ್ಷ ಚುನಾವಣೆಯಲ್ಲಿ ಸೋತಾಗ ಈ ರೀತಿ ಆತ್ಮಾವಲೋಕನ ಸಭೆ ನಡೆಸಿ, ಮಾಮೂಲು ಸಿದ್ಧ ಉತ್ತರ ಹೇಳುವುದು ಪರಿಪಾಠ. ಕಳೆದ 2014ರಲ್ಲಿ ನಡೆದ ಲೋಕಸಭೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಕೂಡ ಇದೇ ರೀತಿ ತಿಪ್ಪೆ ಸಾರಿಸಿತ್ತು ಎಂಬುದು ಈ ಹಿರಿಯರ ಅಭಿಪ್ರಾಯ ಚುನಾವಣೆ ಫಲಿತಾಂಶಕ್ಕೂ ಮುನ್ನ ಕೇಂದ್ರ ಮಾಜಿ ಸಚಿವ, ಬಿಜೆಪಿ ನಾಯಕ, ಅರುಣ್ ಶೌರಿ ಮೋದಿ, ಷಾ ನಾಯಕತ್ವದ ಬಗ್ಗೆ ಬಾಂಬ್ ಹಾಕಿದಾಗಲೇ ಈ ಭಿನ್ನಮತ ಸ್ಫೋಟಗೊಂಡಿತ್ತು. ಫಲಿತಾಂಶದ ಬಳಿಕ ಅದು ಮತ್ತಷ್ಟು ಉಲ್ಬಣಗೊಂಡಿದೆ.

Write A Comment